ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಹರ್ಷಿತಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗಂಗಕ್ಕಾ ಪಾತ್ರ ಮೂಲಕ ಎಲ್ಲರ ಮನ ಗೆದ್ದಿದ್ದ ನಟಿ ಹರ್ಷಿತಾ ಅವರು ಜೀ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯದಲ್ಲೂ ಅಭಿನಯಿಸುತ್ತಿದ್ದರು.
ಮಗುವಿನ ನಿರೀಕ್ಷೆಯಲ್ಲಿದ್ದ ಹರ್ಷಿತಾ ಅವರು ನಟನೆಗೆ ಬ್ರೇಕ್ ನೀಡಿದ್ದಾರೆ. ಯೂಟ್ಯೂಬ್‌ನಲ್ಲಿ ತನ್ನ ಸೀಮಂತದ ಹಾಗೂ ದೈನಂದಿನ ಚಟುವಟಿಕೆ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇನ್ನೂ ಇನ್‌ಸ್ಟಾಗ್ರಾಂನಲ್ಲಿ ಬೇಬಿ ಬಂಪ್ ಫೋಟೋ ಶೂಟ್‌ಗಳನ್ನು ಹಂಚಿಕೊಂಡಿದ್ದಾರೆ.
ಅದ್ದೂರಿಯಾಗಿ ಮಂಗಳೂರು ಶೈಲಿಯಲ್ಲಿ ಸೀಮಂತ ಮಾಡಿಸಿಕೊಂಡ ಹರ್ಷಿತಾಗೆ ಕಿರುತೆರೆ ಕಲಾವಿದರು ಹಾರೈಸಿದ್ದರು. ಇವರ ಪತಿ ಕೂಡಾ ಸ್ಕ್ರಿಪ್ಟ್ ರೈಟರ್ ಆಗಿ ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ.