Webdunia - Bharat's app for daily news and videos

Install App

ಚಪ್ಪಲಿ ಹಾಕಲ್ಲ, ಬರಿಗಾಲಿನಲ್ಲಿರುವುದು ಇಷ್ಟ ಎಂದ ಕಾಲಿವುಡ್‌ ನಟ ವಿಜಯ್‌

sampriya
ಶುಕ್ರವಾರ, 31 ಮೇ 2024 (19:04 IST)
ಚೆನ್ನೈ: ಇಂದಿನ ಫ್ಯಾಷನ್‌ ಜಗತ್ತಿನಲ್ಲಿ ಹಲವರು ನಾನಾ ಬಗೆಯ ಚಪ್ಪಲಿಗಳನ್ನು ಹಾಕುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳಂತೂ ಇನ್ನೂ ವೈವಿಧ್ಯಮಯವಾದ ಚಪ್ಪಲಿ ಧರಿಸುವುದು ಮಾಮೂಲಿ, ಆದರೆ. ಕಾಲಿವುಡ್​ನ ಖ್ಯಾತ ನಟ ವಿಜಯ್​ ಆಂಟೋನಿ ಜೀವನ ಪರ್ಯಂತ ಚಪ್ಪಲಿ ಧರಿಸದೇ ಇರಲು ನಿರ್ಧರಿಸಿದ್ದಾರೆ.

ಬಹುಮುಖ ಪ್ರತಿಭೆಯಾಗಿರುವ ವಿಜಯ್​ ಆಂಟೋನಿ ಅವರ ನಿರ್ಧಾರ ಅಚ್ಚರಿಯಾದರೂ ಅವರು ಮಾತ್ರ ನನಗೆ ಬರಿಗಾಲಿನಲ್ಲಿರುವುದು ಇಷ್ಟ ಎಂದು ಹೇಳಿದ್ದಾರೆ.

ಸಂಗೀತ ನಿರ್ದೇಶಕ, ಗಾಯಕ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ವಿವಿಧ ಕ್ಷೇತ್ರಗಳಲ್ಲಿ ಅವರು ಕೈಯಾಡಿಸಿದ್ದಾರೆ​. ನಾನ್​, ಕಲಿ, ಪಿಚೈಕಾರನ್​, ಸೈತಾನ್​, ಕೊಲೈಗಾರ, ವಿಜಯ್​ ರಾಘವನ್​, ಪಿಚೈಕಾರನ್​ 2 ಮತ್ತು ತಿಮಿರು ಪುಡಿಚವನ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿಚೈಕಾರನ್​ 1 ಮತ್ತು ಭಾಗ 2ನ್ನು ವಿಜಯ್​ ಅವರೇ ನಿರ್ದೇಶನ ಮಾಡಿದ್ದು, ಈ ಎರಡು ಸಿನಿಮಾ ಸೂಪರ್ ಡೂಪರ್​ ಹಿಟ್​ ಆಯಿತು.

ವಿಜಯ್ ಆಂಟೋನಿ ತುಫಾನ್ ಎಂಬ ಸಿನಿಮಾದೊಂದಿಗೆ ಶೀಘ್ರದಲ್ಲೇ ತೆರೆಯ ಬರಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆದಿದ್ದು, ವಿಜಯ್​ ಆಂಟೋನಿ ಈ ಸಮಾರಂಭದಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

ಈ ಬಗ್ಗೆ ವಿಜಯ್‌ ಅವರಿಗೆ ಪ್ರಶ್ನೆ ಎದುರಾದಗ ಉತ್ತರಿಸಿದ್ದು ಹೀಗೆ. ಬರಿಗಾಲಿನಲ್ಲಿರುವುದು ತುಂಬಾ ಚೆನ್ನಾಗಿದೆ. ಮೊದಲಿಗೆ ಸ್ವಲ್ಪ ನೋವು ಇರುತ್ತದೆ ಮತ್ತು ವಿಚಿತ್ರವೆನಿಸುತ್ತದೆ. ಆದರೆ, ನಂತರ ಅದು ಕೂಲ್​ ಎನಿಸುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ನಾನು ಜೀವನ ಪರ್ಯಂತ ಹೀಗೆ ಬರಿಗಾಲಿನಲ್ಲಿ ಇರಲು ಸಂಕಲ್ಪ ಮಾಡಿದ್ದೇನೆ, ಬೇಕಾದರೆ ನೀವೂ ಟ್ರೈ ಮಾಡಿ ನೋಡಿ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments