Webdunia - Bharat's app for daily news and videos

Install App

ಕಾಂತಾರ ಪ್ರೀಕ್ವೆಲ್‌ನಲ್ಲಿ ಮಲೆಯಾಳಂನ ಖ್ಯಾತ ನಟ ಜಯರಾಮ್‌

sampriya
ಶುಕ್ರವಾರ, 31 ಮೇ 2024 (17:55 IST)
Photo By Facebook
ಬೆಂಗಳೂರು: ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಪ್ರೀಕ್ವೆಲ್‌ ಚಿತ್ರದ ಶೂಟಿಂಗ್‌ ಭರದಿಂದ ಸಾಗತ್ತಿದ್ದು, ಇದೀಗ ಚಿತ್ರತಂಡಕ್ಕೆ ಮಲೆಯಾಳಂನ ಖ್ಯಾತ ನಟರೊಬ್ಬರು ಸೇರ್ಪಡೆಯಾಗಿದ್ದಾರೆಂಬ ಸುದ್ದಿಯಿದೆ.

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಜತೆ  “ಘೋಸ್ಟ್ “ ಚಿತ್ರದ ಮೂಲಕ ಕನ್ನಡದಲ್ಲಿ ನಟಿಸಿದ್ದ ಮಲೆಯಾಳಂ ನಟ ಜಯರಾಮ್ ಅವರು ಇದೀಗ ಕಾಂತಾರ ಚಿತ್ರತಂಡದ ಜತೆ ಜೊತೆಯಾಗಿದ್ದಾರೆ.

ಮಹತ್ವಾಕಾಂಕ್ಷೆಯ ಬಹುಭಾಷಾ ಈ ಸಿನಿಮಾ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, ಜಯರಾಮ್ ಅದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಹೊಂಬಾಳೆ ಫಿಲ್ಮ್ಸ್ ಈ ಯೋಜನೆಯಲ್ಲಿ ಜಯರಾಮ್ ಭಾಗಿಯಾಗಿರುವ ಬಗ್ಗೆ ಅಧಿಕೃತ ಹೇಳಿಕೆಯನ್ನು ಇನ್ನೂ ಹೇಳಿಲ್ಲ.

ಅದ್ಯ ಜಯರಾಮ್‌ ಅವರು  ನಟ ಧನುಷ್ ಅವರ ರಾಯನ್ ಮತ್ತು ವಿಜಯ್ ಅವರ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್  ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನೂ ಕಾಂತಾರ ಪ್ರೀಕ್ವೆಲ್‌ಗೆ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಅವರೊಂದಿಗೆ ನಟ ರಿಷಭ್‌ ಶೆಟ್ಟಿ ಅವರು ಕಥೆ ಮತು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಈ ಪ್ಯಾನ್ ಇಂಡಿಯಾ ಯೋಜನೆಯಲ್ಲಿ ಮೂಲ ಚಿತ್ರದ ಕೆಲವು ನಟರು ತಮ್ಮ ಪಾತ್ರಗಳನ್ನು ಪುನರಾವರ್ತಿಸುವ ನಿರೀಕ್ಷೆಯಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments