ಭವಿಷ್ಯ ನೆನೆದು ದೂರ ದೂರವಾದ್ರ ಪ್ರಣಯ ಜೋಡಿ ಮಲೈಕಾ- ಅರ್ಜುನ್‌

sampriya
ಶುಕ್ರವಾರ, 31 ಮೇ 2024 (15:14 IST)
Photo By Instagram
ಮುಂಬೈ: ಬಾಲಿವುಡ್‌ ಅಂಗಳದಲ್ಲಿ ಭಾರೀ ಸುದ್ದಿ ಮಾಡಿದ್ದ ಪ್ರಣಯ ಜೋಡಿ ಮಾಡೆಲ್‌ ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್ ಇದೀಗ ಬೇರೆ ಬೇರೆಯಾಗಿದೆ. ಭವಿಷ್ಯದ ಬಗ್ಗೆ ಚಿಂತಿಸಿ ಇಬ್ಬರು ಸಮ್ಮತಿಸಿ ದೂರವಾಗಿದ್ದಾರೆ ಎನ್ನಲಾಗಿದೆ.

ಮಲೈಕಾ ಮತ್ತು ಅರ್ಜುನ್‌ಗೆ 12 ವರ್ಷಗಳ ಅಂತರವಿದೆ. ಮಲೈಕಾಗೆ 50 ವರ್ಷವಾದರೆ, ಅರ್ಜುನ್‌ಗೆ 38. ಈ ಜೋಡಿ ಒಟ್ಟಿಗೆ ಇರುವುದನ್ನು ಕಂಡು ತುಂಬಾ ಮಂದಿ ವ್ಯಂಗ್ಯ ಮಾಡಿದ್ದು ಇದೆ. ಆದರೆ,  ಈ ಜೋಡಿ ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಅರ್ಜುನ್ ಇನ್ನೂ ಅವಿವಾಹಿತ. ಅವರು ಮದುವೆ ಆಗಿ ಮಗುವನ್ನು ಪಡೆಯಬೇಕು ಎನ್ನುವ ಕನಸು ಕಂಡಿದ್ದಾರೆ. ಮಲೈಕಾ ವಯಸ್ಸಿಗೆ ಅದು ಸಾಧ್ಯವಿಲ್ಲ. ಮಲೈಕಾಗೆ 22 ವರ್ಷದ ಮಗನಿದ್ದಾನೆ. ಒಂದೊಮ್ಮೆ ಈ ವಯಸ್ಸಿನಲ್ಲಿ ಅವರು ಮಗು ಪಡೆದರೆ ಸಾಕಷ್ಟು ಟ್ರೋಲ್ ಆಗಬೇಕಾಗುತ್ತದೆ. ಹೀಗಾಗಿ, ಭವಿಷ್ಯವನ್ನು ನೆನೆದು ದೂರ ದೂರವಾಗಿದ್ದಾರೆ.

ಇಬ್ಬರ ಮಧ್ಯೆ ಈಗಲೂ ಗೆಳೆತನವಿದೆ. ಇನ್​ಸ್ಟಾಗ್ರಾಮ್​ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಮಲೈಕಾ ಹಾಗೂ ಅರ್ಜುನ್ ಅಷ್ಟಾಗಿ ಒಟ್ಟಾಗಿ ಕಾಣಿಸಿಲ್ಲ. ತಾವು ದೂರ ದೂರ ಆದ ಬಗ್ಗೆಯೂ ಎಲ್ಲಿಯೂ ಚಕಾರ ಎತ್ತಿಲ್ಲ. ಆ ಕುರಿತು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದು ಅವರಿಗೆ ಇಷ್ಟವಿಲ್ಲವಂತೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಮುಂದಿನ ಸುದ್ದಿ
Show comments