Publish Date: Fri, 31 May 2024 (15:14 IST)
Updated Date: Fri, 31 May 2024 (15:18 IST)
ಮುಂಬೈ: ಬಾಲಿವುಡ್ ಅಂಗಳದಲ್ಲಿ ಭಾರೀ ಸುದ್ದಿ ಮಾಡಿದ್ದ ಪ್ರಣಯ ಜೋಡಿ ಮಾಡೆಲ್ ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್ ಇದೀಗ ಬೇರೆ ಬೇರೆಯಾಗಿದೆ. ಭವಿಷ್ಯದ ಬಗ್ಗೆ ಚಿಂತಿಸಿ ಇಬ್ಬರು ಸಮ್ಮತಿಸಿ ದೂರವಾಗಿದ್ದಾರೆ ಎನ್ನಲಾಗಿದೆ.
ಮಲೈಕಾ ಮತ್ತು ಅರ್ಜುನ್‌ಗೆ 12 ವರ್ಷಗಳ ಅಂತರವಿದೆ. ಮಲೈಕಾಗೆ 50 ವರ್ಷವಾದರೆ, ಅರ್ಜುನ್‌ಗೆ 38. ಈ ಜೋಡಿ ಒಟ್ಟಿಗೆ ಇರುವುದನ್ನು ಕಂಡು ತುಂಬಾ ಮಂದಿ ವ್ಯಂಗ್ಯ ಮಾಡಿದ್ದು ಇದೆ. ಆದರೆ, ಈ ಜೋಡಿ ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
ಅರ್ಜುನ್ ಇನ್ನೂ ಅವಿವಾಹಿತ. ಅವರು ಮದುವೆ ಆಗಿ ಮಗುವನ್ನು ಪಡೆಯಬೇಕು ಎನ್ನುವ ಕನಸು ಕಂಡಿದ್ದಾರೆ. ಮಲೈಕಾ ವಯಸ್ಸಿಗೆ ಅದು ಸಾಧ್ಯವಿಲ್ಲ. ಮಲೈಕಾಗೆ 22 ವರ್ಷದ ಮಗನಿದ್ದಾನೆ. ಒಂದೊಮ್ಮೆ ಈ ವಯಸ್ಸಿನಲ್ಲಿ ಅವರು ಮಗು ಪಡೆದರೆ ಸಾಕಷ್ಟು ಟ್ರೋಲ್ ಆಗಬೇಕಾಗುತ್ತದೆ. ಹೀಗಾಗಿ, ಭವಿಷ್ಯವನ್ನು ನೆನೆದು ದೂರ ದೂರವಾಗಿದ್ದಾರೆ.
ಇಬ್ಬರ ಮಧ್ಯೆ ಈಗಲೂ ಗೆಳೆತನವಿದೆ. ಇನ್ಸ್ಟಾಗ್ರಾಮ್ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಮಲೈಕಾ ಹಾಗೂ ಅರ್ಜುನ್ ಅಷ್ಟಾಗಿ ಒಟ್ಟಾಗಿ ಕಾಣಿಸಿಲ್ಲ. ತಾವು ದೂರ ದೂರ ಆದ ಬಗ್ಗೆಯೂ ಎಲ್ಲಿಯೂ ಚಕಾರ ಎತ್ತಿಲ್ಲ. ಆ ಕುರಿತು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದು ಅವರಿಗೆ ಇಷ್ಟವಿಲ್ಲವಂತೆ.