Select Your Language

Notifications

webdunia
webdunia
webdunia
webdunia

ಚಪ್ಪಲಿ ಹಾಕಲ್ಲ, ಬರಿಗಾಲಿನಲ್ಲಿರುವುದು ಇಷ್ಟ ಎಂದ ಕಾಲಿವುಡ್‌ ನಟ ವಿಜಯ್‌

ಚಪ್ಪಲಿ ಹಾಕಲ್ಲ, ಬರಿಗಾಲಿನಲ್ಲಿರುವುದು ಇಷ್ಟ ಎಂದ ಕಾಲಿವುಡ್‌ ನಟ ವಿಜಯ್‌

sampriya

ಚೆನ್ನೈ , ಶುಕ್ರವಾರ, 31 ಮೇ 2024 (19:04 IST)
ಚೆನ್ನೈ: ಇಂದಿನ ಫ್ಯಾಷನ್‌ ಜಗತ್ತಿನಲ್ಲಿ ಹಲವರು ನಾನಾ ಬಗೆಯ ಚಪ್ಪಲಿಗಳನ್ನು ಹಾಕುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳಂತೂ ಇನ್ನೂ ವೈವಿಧ್ಯಮಯವಾದ ಚಪ್ಪಲಿ ಧರಿಸುವುದು ಮಾಮೂಲಿ, ಆದರೆ. ಕಾಲಿವುಡ್​ನ ಖ್ಯಾತ ನಟ ವಿಜಯ್​ ಆಂಟೋನಿ ಜೀವನ ಪರ್ಯಂತ ಚಪ್ಪಲಿ ಧರಿಸದೇ ಇರಲು ನಿರ್ಧರಿಸಿದ್ದಾರೆ.

ಬಹುಮುಖ ಪ್ರತಿಭೆಯಾಗಿರುವ ವಿಜಯ್​ ಆಂಟೋನಿ ಅವರ ನಿರ್ಧಾರ ಅಚ್ಚರಿಯಾದರೂ ಅವರು ಮಾತ್ರ ನನಗೆ ಬರಿಗಾಲಿನಲ್ಲಿರುವುದು ಇಷ್ಟ ಎಂದು ಹೇಳಿದ್ದಾರೆ.

ಸಂಗೀತ ನಿರ್ದೇಶಕ, ಗಾಯಕ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ವಿವಿಧ ಕ್ಷೇತ್ರಗಳಲ್ಲಿ ಅವರು ಕೈಯಾಡಿಸಿದ್ದಾರೆ​. ನಾನ್​, ಕಲಿ, ಪಿಚೈಕಾರನ್​, ಸೈತಾನ್​, ಕೊಲೈಗಾರ, ವಿಜಯ್​ ರಾಘವನ್​, ಪಿಚೈಕಾರನ್​ 2 ಮತ್ತು ತಿಮಿರು ಪುಡಿಚವನ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿಚೈಕಾರನ್​ 1 ಮತ್ತು ಭಾಗ 2ನ್ನು ವಿಜಯ್​ ಅವರೇ ನಿರ್ದೇಶನ ಮಾಡಿದ್ದು, ಈ ಎರಡು ಸಿನಿಮಾ ಸೂಪರ್ ಡೂಪರ್​ ಹಿಟ್​ ಆಯಿತು.

ವಿಜಯ್ ಆಂಟೋನಿ ತುಫಾನ್ ಎಂಬ ಸಿನಿಮಾದೊಂದಿಗೆ ಶೀಘ್ರದಲ್ಲೇ ತೆರೆಯ ಬರಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆದಿದ್ದು, ವಿಜಯ್​ ಆಂಟೋನಿ ಈ ಸಮಾರಂಭದಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

ಈ ಬಗ್ಗೆ ವಿಜಯ್‌ ಅವರಿಗೆ ಪ್ರಶ್ನೆ ಎದುರಾದಗ ಉತ್ತರಿಸಿದ್ದು ಹೀಗೆ. ಬರಿಗಾಲಿನಲ್ಲಿರುವುದು ತುಂಬಾ ಚೆನ್ನಾಗಿದೆ. ಮೊದಲಿಗೆ ಸ್ವಲ್ಪ ನೋವು ಇರುತ್ತದೆ ಮತ್ತು ವಿಚಿತ್ರವೆನಿಸುತ್ತದೆ. ಆದರೆ, ನಂತರ ಅದು ಕೂಲ್​ ಎನಿಸುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ನಾನು ಜೀವನ ಪರ್ಯಂತ ಹೀಗೆ ಬರಿಗಾಲಿನಲ್ಲಿ ಇರಲು ಸಂಕಲ್ಪ ಮಾಡಿದ್ದೇನೆ, ಬೇಕಾದರೆ ನೀವೂ ಟ್ರೈ ಮಾಡಿ ನೋಡಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಪ್ರೀಕ್ವೆಲ್‌ನಲ್ಲಿ ಮಲೆಯಾಳಂನ ಖ್ಯಾತ ನಟ ಜಯರಾಮ್‌