ಬೆಂಗಳೂರು: 777 ಚಾರ್ಲಿ ಸಿನಿಮಾ ಎಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, ಚಿತ್ರದಲ್ಲಿ ನಾಯಿ ಚಾರ್ಲಿ ಮತ್ತು ಧರ್ಮ ನಟನೆಯನ್ನು ನೋಡಿ ಎಲ್ಲರೂ ಕಣ್ಣೀರು ಹಾಕುತ್ತಲೇ ಥಿಯೇಟರ್ ನಿಂದ ಹೊರಗೆ ಬಂದಿದ್ದಾರೆ.
ಈ ನಡುವೆ ಮಕ್ಕಳಿಗೂ ಈ ಸಿನಿಮಾ ಇಷ್ಟವಾಗುತ್ತಿದ್ದು, ಇದೇ ರೀತಿ ಸಿನಿಮಾ ನೋಡಿ ಕಣ್ಣೀರು ಹಾಕಿದ ಮಕ್ಕಳಿಗೆ ಸ್ವತಃ ನಿರ್ದೇಶಕ ಕಿರಣ್ ರಾಜ್ ಸಾಂತ್ವನ ಹೇಳಿ ಸರ್ಪೈಸ್ ಕೊಟ್ಟಿದ್ದಾರೆ.
ತಮ್ಮ ಸಿನಿಮಾ ನೋಡಿ ಕಣ್ಣೀರು ಹಾಕಿದ ಬಾಲಕಿಯನ್ನು ಸಂತೈಸಿದ ಕಿರಣ್ ರಾಜ್ ಬಳಿಕ ಚಾರ್ಲಿಗೆ ವಿಡಿಯೋ ಕಾಲ್ ಕರೆ ಮಾಡಿ ಮಾತನಾಡಿಸಿದ್ದಾರೆ. ಇಂತಹ ಭಾವನಾತ್ಮಕ ಗಳಿಗೆಯನ್ನು ನನ್ನ ಜೀವನ ಪೂರ್ತಿ ಮರೆಯಲ್ಲ ಎಂದಿದ್ದಾರೆ ಕಿರಣ್ ರಾಜ್.