Publish Date: Thu, 16 Jun 2022 (16:54 IST)
Updated Date: Thu, 16 Jun 2022 (16:56 IST)
ಬೆಂಗಳೂರು: ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಜೊತೆಗಿನ ಫೋಟೋ, ವಿಡಿಯೋ ಪ್ರಕಟಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.
ಇದೀಗ ರಾಧಿಕಾ ತಮ್ಮ ಮಕ್ಕಳ ಜೊತೆ ಕಿಡ್ಸ್ ಪಾರ್ಟಿ ಮಾಡಿದ ಕ್ಷಣಗಳ ಫೋಟೋಗಳನ್ನು ಪ್ರಕಟಿಸಿದ್ದು, ವೈರಲ್ ಆಗಿದೆ.
ರಾಧಿಕಾ ಜೊತೆಗೆ ಮಗಳು ಐರಾ, ಪುತ್ರ ಯಥರ್ವ್ ಅಲ್ಲದೆ, ಅಣ್ಣನ ಮಕ್ಕಳು ಸೇರಿ ಕಿಡ್ಸ್ ಪಾರ್ಟಿ ಮಾಡಿದ್ದಾರೆ. ಮಕ್ಕಳ ದರ್ಬಾರ್ ನಲ್ಲಿ ರಾಧಿಕಾ ಕೂಡಾ ಖುಷಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಪ್ರವಾಸದ ಸಂದರ್ಭದಲ್ಲಿ ರಾಧಿಕಾ ಮಕ್ಕಳೊಂದಿಗೆ ಪಾರ್ಟಿ ಮಾಡಿದ್ದಾರೆ.