ನವರಾತ್ರಿ ವೇಳೆ ಅಮ್ಮನಿಗಾಗಿ ಚಪ್ಪಲಿ ಧರಿಸದೆ, ವ್ರತ ಮಾಡಿದ್ದ ಕಿಚ್ಚ ಸುದೀಪ್

Sampriya
ಭಾನುವಾರ, 20 ಅಕ್ಟೋಬರ್ 2024 (11:41 IST)
Photo Courtesy X
ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿಯುತ್ತಿದ್ದ ಹಾಗೇ ಅಮ್ಮನನ್ನು ನೋಡಲು ಸುದೀಪ್ ಆಸ್ಪತ್ರೆಗೆ ನೋವಿನಲ್ಲೇ ಬಂದಿದ್ದಾರೆ.

ಈಚೆಗೆ ತಾಯಿಗೋಸ್ಕರ ಸುದೀಪ ವ್ರತ ಆಚರಿಸಿಕೊಂಡಿದ್ದರು. ಹೌದು ಬಿಗ್‌ಬಾಸ್‌ ಸೀಸನ್ ಮೊದಲ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಚಪ್ಪಲಿ ಹಾಕದೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು.  ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ಸ್ಟೈಲಿಶ್ ಬಟ್ಟೆಯೊಂದಿಗೆ ಅದಕ್ಕೆ ಹೊಂದುವ ಚಪ್ಪಲಿ, ಶೂ ಧರಿಸಿ ವೇದಿಕೆ ಬರುತ್ತಿದ್ದರು.

ಆದರೆ ನವರಾತ್ರಿಯಂದು ಬಾರಿಗಾಲಲ್ಲೇ ವೀಕೆಂಡ್‌ ಶೂ ಅನ್ನು ಮುಗಿಸಿ, ಅಚ್ಚರಿ ಮೂಡಿಸಿದ್ದರು. ಇದಕ್ಕೆ ಕಾರಣ ಅವರ ಅಮ್ಮನೇ ಎಂದಿದ್ದರು.

ನವರಾತ್ರಿ ಹಿನ್ನೆಲೆ ಅಮ್ಮನಿಗಾಗಿ ವ್ರತ ಮಾಡಿದ ಸುದೀಪ್ ಅವರು ಕಾಲಿಗೆ ಚಪ್ಪಲಿ ಧರಿಸದೇ ಬರಿಗಾಲಲ್ಲಿ ವೇದಿಕೆಗೆ ಬಂದಿದ್ದರು. ಅದಲ್ಲದೆ ಅಮ್ಮನ ಮಾತಿನಂತೆ ಬೂದು ಬಣ್ಣದ ಡ್ರೆಸ್‌ನಲ್ಲಿ ಬಂದಿದ್ದರು. ಅದಲ್ಲದೆ ಅಮ್ಮ ಈಗ ಓಕೆನಾ ಎಂದು ಶೋ ಮೂಲಕನೇ ಕೇಳಿಕೊಂಡಿದ್ದರು.




ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

IMDb 2025 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಪ್ರಕಟ

ನಿನ್ನ ವ್ಯಕ್ತಿತ್ವಕ್ಕೆ ನಾನೇ ನಿನ್ನ ದೊಡ್ಡ ಚಿಯರ್‌ಲೀಡರ್‌: ರುಕ್ಮಿಣಿ ವಸಂತ್‌ಗೆ ಚೈತ್ರಾ ಪ್ರೀತಿಯ ವಿಶ್‌

ಮುಂದಿನ ಸುದ್ದಿ
Show comments