ಕಿಚ್ಚ ಸುದೀಪ್ ಮೆಚ್ಚಿಕೊಂಡ ರಾಧಿಕಾ ಪಂಡಿತ್ ಪುರಾಣ!

ಭಾನುವಾರ, 10 ಫೆಬ್ರವರಿ 2019 (08:15 IST)
ಬೆಂಗಳೂರು: ಮದುವೆಯಾದ ಬಳಿಕ ರಾಧಿಕಾ ಪಂಡಿತ್ ಅಭಿನಯಿಸಿದ್ದ ಮೊದಲ ಸಿನಿಮಾ ಆದಿಲಕ್ಷ್ಮಿ ಪುರಾಣದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿದೆ.


ಈ ಸಿನಿಮಾದ ಟ್ರೈಲರ್ ನೋಡಿ ಇದೀಗ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಧಿಕಾ ಪಂಡಿತ್ ಬಬ್ಲೀ ಕ್ಯಾರೆಕ್ಟರ್ ನೋಡಿ ಖುಷಿಯಾಗಿರುವ ಅಭಿಮಾನಿಗಳು ‘ಅತ್ತಿಗೆ ಈಸ್ ಬ್ಯಾಕ್’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದರ ನಡುವೆ ಚಿತ್ರದ ನಾಯಕ ನಿರೂಪ್ ಭಂಡಾರಿಗೆ ಕಿಚ್ಚ ಸುದೀಪ್ ಶುಭಾಷಯ ಹೇಳಿದ್ದಾರೆ. ‘ನಿರೂಪ್ ಭಂಡಾರಿಗೆ ನನ್ನ ಶುಭ ಹಾರೈಕೆಗಳು. ಟ್ರೈಲರ್ ಭಾರೀ ನಿರೀಕ್ಷೆ ಮೂಡಿಸಿದೆ. ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. ರಾಧಿಕಾ ಅಭಿಮಾನಿಗಳು ಕೂಡಾ ಈ ಸಿನಿಮಾಗಾಗಿ ಭಾರೀ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಂಜಯ್ ದತ್ ಸಂಪರ್ಕಿಸಿದ್ದು ನಿಜ ಎಂದು ಒಪ್ಪಿಕೊಂಡ ರಾಕಿಂಗ್ ಸ್ಟಾರ್ ಯಶ್