Daily Horoscope

Select Your Language

Notifications

webdunia
webdunia
webdunia
webdunia

ತಮ್ಮನ್ನು ಪೂಜೆ ಮಾಡುವ ಪುಟಾಣಿಯ ವಿಡಿಯೋ ನೋಡಿ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?

ಕಿಚ್ಚ ಸುದೀಪ್
ಬೆಂಗಳೂರು: ಸಿನಿ ತಾರೆಯರ ಮೇಲೆ ಅಭಿಮಾನಿಗಳು ವಿಶಿಷ್ಟವಾಗಿ ತಮ್ಮ ಅಭಿಮಾನ ತೋರಿಸಿಕೊಳ್ಳುವುದು ಹೊಸದೇನಲ್ಲ. ಆದರೆ ತಮ್ಮ ಮೇಲೆ ಅಭಿಮಾನ ತೋರಿದ ಅಭಿಮಾನಿಯೊಬ್ಬರಿಗೆ ಕಿಚ್ಚ ಸುದೀಪ್ ಬುದ್ಧಿವಾದ ಹೇಳಿದ್ದಾರೆ.


ಪುಟಾಣಿಯೊಬ್ಬಳು ತಮ್ಮ ಕಟೌಟ್ ಗೆ ಅಗರಬತ್ತಿಯಲ್ಲಿ ಆರತಿ ಮಾಡುವ ವಿಡಿಯೋವೊಂದನ್ನು ಅಭಿಮಾನಿಯೊಬ್ಬರು ಟ್ವೀಟ್ ಮೂಲಕ ಕಿಚ್ಚನ ಗಮನಕ್ಕೆ ತಂದಿದ್ದರು. ಇದನ್ನು ನೋಡಿದ ಕಿಚ್ಚ ಸುದೀಪ್ ಅಭಿಮಾನಿಗೆ ಬುದ್ಧಿ ಹೇಳಿದ್ದಾರೆ.

‘ವೆರಿ ಸ್ವೀಟ್.. ಆದರೆ ದಯವಿಟ್ಟು ಈ ಪುಟಾಣಿ ಕೈಯಲ್ಲಿ ಹೀಗೆಲ್ಲಾ ಮಾಡಿಸಬೇಡಿ. ಪ್ರೀತಿಗೆ ಧನ್ಯವಾದ’ ಎಂದು ಕಿಚ್ಚ ಸುದೀಪ್ ಅಭಿಮಾನಿಗೆ ತಿಳಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನೀನಾಸಂ ಸತೀಶ್ ‘ಚಂಬಲ್’ನಲ್ಲಿದೆ ಈ ಐಎಎಸ್ ಅಧಿಕಾರಿಯ ರಿಯಲ್ ಕಹಾನಿ