ಬೆಂಗಳೂರು: ಇಂದು ಎಪಿ ಅರ್ಜುನ್ ನಿರ್ದೇಶನದ ವಿರಾಟ್-ಶ್ರೀಲೀಲಾ ಅಭಿನಯದ ಕಿಸ್ ಸಿನಿಮಾ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ವಿಶಿಷ್ಟವಾಗಿ ಶುಭ ಹಾರೈಸಿದ್ದಾರೆ.
									
										
								
																	
ಯಾವುದೇ ಸಿನಿಮಾ ಬಿಡುಗಡೆಯಾಗುತ್ತಿದ್ದರೂ ಕಿಚ್ಚ ಸುದೀಪ್ ತಮ್ಮ ಆತ್ಮೀಯರಿಗೆ ಮರೆಯದೇ ಶುಭ ಹಾರೈಸುತ್ತಾರೆ. ಈಗ ಎಪಿ ಅರ್ಜುನ್ ಗೂ ಶುಭ ಹಾರೈಸಿದ್ದಾರೆ. ಆದರೆ ಸಿನಿಮಾದ ಟೈಟಲ್ ನ್ನೇ ಇಟ್ಟುಕೊಂಡು ಸುದೀಪ್ ಎಪಿ ಅರ್ಜುನ್ ಕಾಲೆಳೆದಿದ್ದಾರೆ.
									
			
			 
 			
 
 			
			                     
							
							
			        							
								
																	‘ಎಪಿ ಅರ್ಜುನ್ ಗೆ ಶುಭ ಹಾರೈಕೆಗಳು. ಯಾರೂ ಕಿಸ್ ಮಿಸ್ ಮಾಡಬೇಡಿ. ಅಂದರೆ ನಾನು ಖಂಡಿತಾ ಕಿಸ್ ನೋಡುತ್ತೇನೆ. ಅಯ್ಯೋ... ಇಲ್ಲಪ್ಪಾ ನೀವು ಕಿಸ್ ಮಾಡೋದನ್ನು ನೋಡಲ್ಲ. ನಾನು ಹೇಳಿದ್ದರ ಅರ್ಥ ನಾನು ನಿಮ್ಮ ಕಿಸ್ ಸಿನಿಮಾ ನೋಡುತ್ತೇನೆ. ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಕಿಚ್ಚ ಸುದೀಪ್ ತಮಾಷೆಯಾಗಿಯೇ ವಿಷ್ ಮಾಡಿದ್ದಾರೆ.