Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ‘ಗೀತಾ’, ವಿರಾಟ್ ‘ಕಿಸ್’ ಗೆ ನಾಳೆ ಬಿಡುಗಡೆಯ ಭಾಗ್ಯ

ಗೋಲ್ಡನ್ ಸ್ಟಾರ್ ಗಣೇಶ್  ‘ಗೀತಾ’, ವಿರಾಟ್ ‘ಕಿಸ್’ ಗೆ ನಾಳೆ ಬಿಡುಗಡೆಯ ಭಾಗ್ಯ
ಬೆಂಗಳೂರು , ಗುರುವಾರ, 26 ಸೆಪ್ಟಂಬರ್ 2019 (10:34 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಮತ್ತು ಎಪಿ ಅರ್ಜುನ್ ನಿರ್ದೇಶನದ, ವಿರಾಟ್ ನಾಯಕರಾಗಿ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಅಭಿನಯಿಸಿರುವ ‘ಕಿಸ್’ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಪೈಲ್ವಾನ್ ಸಿನಿಮಾ ಪೈರಸಿಯಿಂದ ಎಚ್ಚೆತ್ತುಕೊಂಡ ಗೀತಾ ತಂಡ ಪೈರಸಿ ತೆಡೆಗೆ ಎಲ್ಲಾ ಕ್ರಮ ಕೈಗೊಂಡಿದೆ. ಗೋಕಾಕ್ ಚಳವಳಿ ಹಿನ್ನಲೆಯ ಕತೆಯಿರುವ ಗೀತಾ ಸಿನಿಮಾ ಬಗ್ಗೆ ಗಣೇಶ್ ಅಭಿಮಾನಿಗಳಲ್ಲೂ ಸಾಕಷ್ಟು ನಿರೀಕ್ಷೆಯಿದೆ.

ಇನ್ನು, ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ವಿರಾಟ್ ಮತ್ತು ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಎಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಭರ್ಜರಿ ಸೌಂಡ್ ಮಾಡಿದೆ. ಈ ಸಿನಿಮಾವೂ ಇಂದು ತೆರೆಗೆ ಬರುತ್ತಿದ್ದು, ವಿರಾಟ್ ನಾಯಕರಾಗಿ ಸ್ಯಾಂಡಲ್ ವುಡ್ ನಲ್ಲಿ ತಳವೂರುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಎರಡು ಬಹುನಿರೀಕ್ಷಿತ ಸಿನಿಮಾಗಳು ಇಂದು ಒಂದೇ ದಿನ ಕನ್ನಡ ಚಿತ್ರಪ್ರೇಮಿಗಳಿಗೆ ರಸದೌತಣ ನೀಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ