ಸಾಹಸಸಿಂಹ ವಿಷ್ಣುವರ್ಧನ್ ಜತೆ ಹೋಲಿಕೆ ಮಾಡಲು ಹೊರಟವರಿಗೆ ಕತ್ತರಿ ಹಾಕಿದ ಕಿಚ್ಚ ಸುದೀಪ್

Webdunia
ಶುಕ್ರವಾರ, 1 ಮೇ 2020 (09:40 IST)
ಬೆಂಗಳೂರು: ಇತ್ತೀಚೆಗೆ ಅಭಿಮಾನಿಗಳು ಮಾಡುವ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ನಿಂದಲೇ ಸ್ಟಾರ್ ಗಳ ನಡುವೆ, ಸ್ಟಾರ್ ಗಳ ಅಭಿಮಾನಿಗಳ ನಡುವೆ ಕಿತ್ತಾಟ ನಡೆವ ಎಷ್ಟೋ ಪ್ರಸಂಗಗಳು ನಡೆಯುತ್ತಿವೆ.


ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ ಯಾರೂ ಇದಕ್ಕೆ ಹೊರತಲ್ಲ. ಈ ಸ್ಟಾರ್ ನಟರ ಹೆಸರಿನಲ್ಲಿ ಅಭಿಮಾನಿಗಳು ಮಾಡುವ ಕೆಸರೆರಚಾಟ ಎಲ್ಲರಿಗೂ ಗೊತ್ತೇ ಇದೆ. ಆದರೆ ತಮ್ಮ ಸಿನಿಮಾ ಜತೆಗೆ ಸಾಹಸಸಿಂಹ ವಿಷ್ಣುವರ್ಧನ್ ಸಿನಿಮಾವನ್ನು ಕಂಪೇರ್ ಮಾಡಲು ಹೊರಟ ಅಭಿಮಾನಿಯೊಬ್ಬನಿಗೆ ಕಿಚ್ಚ ಸುದೀಪ್ ಆರಂಭದಲ್ಲೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಕೋಟಿಗೊಬ್ಬ ಸಿನಿಮಾದಲ್ಲಿ 2001 ರಲ್ಲಿ ವಿಷ್ಣುವರ್ಧನ್ ನಾಯಕರಾಗಿ ನಟಿಸಿದ್ದರು. ಅದಾದ ಬಳಿಕ ಕಿಚ್ಚ ಸುದೀಪ್ ಕೋಟಿಗೊಬ್ಬ 2 ಮತ್ತು ಈಗ ಕೋಟಿಗೊಬ್ಬ 3 ಸಿನಿಮಾ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರು ಕೋಟಿಗೊಬ್ಬ ಸಿನಿಮಾ ಸರಣಿಯಲ್ಲಿ ಯಾವ ಸಿನಿಮಾದ ಹಾಡುಗಳು ನಿಮಗಿಷ್ಟ ಎಂದು ಟ್ವಿಟರ್ ನಲ್ಲಿ ಸಮೀಕ್ಷೆ ನಡೆಸಲು ಹೊರಟಿದ್ದರು. ಇವರಿಗೆ ಟ್ವಿಟರ್ ಮೂಲಕವೇ ಕಿಚ್ಚ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

‘ಕೋಟಿಗೊಬ್ಬ ಆರಂಭವಾಗಿದ್ದು ಅಪ್ಪಾಜಿ ವಿಷ್ಣು ಸರ್ ಅವರಿಂದ. ಅವರು ಆರಂಭಿಸಿದ ಸರಣಿಗೆ ಯಾವುದನ್ನೂ ಹೋಲಿಕೆ ಮಾಡಲಾಗದು. ಹೀಗಾಗಿ ನಮ್ಮ ಹಿರಿಯರು ಹಾಕಿಕೊಟ್ಟ ಅಡಿಗಲ್ಲಿಗೆ ಕೇಡಾಗುವಂತಹ ಇಂತಹ ಸಮೀಕ್ಷೆಗಳನ್ನು ನಡೆಸಬೇಡಿ ಎಂದು ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತೇನೆ. ಅವರಿಗೆ ಹೋಲಿಸಿದರೆ ನಾನು ತುಂಬಾ ಚಿಕ್ಕವನು’ ಎಂದು ಸುದೀಪ್ ಖಡಕ್ ಆಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ

ರಾಜ್ ಬಿ ಶೆಟ್ಟಿ ಹೆಸರೂ ಹೇಳದ ರಿಷಬ್ ಶೆಟ್ಟಿ: ನೆಟ್ಟಿಗರದ್ದು ಒಂದೇ ಪ್ರಶ್ನೆ

ಮದುವೆ ಬಳಿಕ ಮೊದಲ ಬಾರೀ ಒಟ್ಟಿಗೆ ಕಾಣಿಸಿಕೊಂಡ ಸಮಂತಾ- ರಾಜ್‌ ನಿಡಿಮೋರು

ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅನುಮಾನಾಸ್ಪದ ಸಾವು

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಮುಂದಿನ ಸುದ್ದಿ
Show comments