ಸೈಮಾ ಅವಾರ್ಡ್ಸ್ ವೇದಿಕೆಯಲ್ಲಿ ಕನ್ನಡ್ ಎಂದ ವ್ಯಕ್ತಿಗೆ ಕಿಚ್ಚ ಸುದೀಪ್ ಕ್ಲಾಸ್ (Video)

Krishnaveni K
ಸೋಮವಾರ, 16 ಸೆಪ್ಟಂಬರ್ 2024 (11:18 IST)
ದುಬೈ: ಈ ವಾರಂತ್ಯದಲ್ಲಿ ದುಬೈನಲ್ಲಿ ನಡೆದಿದ್ದ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡ್ ಎಂದ ವ್ಯಕ್ತಿಗೆ ಕಿಚ್ಚ ಸುದೀಪ್ ವೇದಿಕೆಯಲ್ಲೇ ಕ್ಲಾಸ್ ತೆಗೆದುಕೊಂಡ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದುಬೈನಲ್ಲಿ ಈ ಬಾರಿ ಪ್ರತಿಷ್ಠಿತ ದಕ್ಷಿಣ ಭಾರತದ ಸಿನಿಮಾ ರಂಗದ ಪ್ರಶಸ್ತಿ ಸಮಾರಂಭ ಸೈಮಾ ಅವಾರ್ಡ್ಸ್ ಆಯೋಜನೆಯಾಗಿತ್ತು. ಕನ್ನಡ ಸಿನಿಮಾ ತಾರೆಯರೂ ಇದರಲ್ಲಿ ಭಾಗಿಯಾಗಿದ್ದರು. ಅದರಂತೆ ಕಿಚ್ಚ ಸುದೀಪ್ ಕೂಡಾ ತಮ್ಮ ಕುಟುಂಬ ಸಮೇತ ಸೈಮಾ ಕಾರ್ಯಕ್ರಮಕ್ಕೆ ಹೋಗಿದ್ದರು.

ಈ ವೇಳೆ ವೇದಿಕೆಯಲ್ಲಿ ಹೈದರಾಬಾದ್ ಮೂಲದ ತಾರೆ ಕನ್ನಡ್ ಎಂದು ಬಿಟ್ಟರು. ಇದು ಕಿಚ್ಚ ಸುದೀಪ್ ಗೆ ಇಷ್ಟವಾಗಿಲ್ಲ. ಕನ್ನಡ ಎಂಬ ಪದವನ್ನು ಕನ್ನಡ್ ಎಂದಿದ್ದಕ್ಕೆ ಸುದೀಪ್ ವೇದಿಕೆಯಲ್ಲೇ ಆತನನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಆ ವ್ಯಕ್ತಿ ಕ್ಷಮೆ ಕೇಳಿ ಕನ್ನಡ ಎಂದು ಸ್ಪಷ್ಟವಾಗಿ ಉಚ್ಚರಿಸಿದರು.

‘ಮುಂಬೈ ಮೂಲದವರು ಕನ್ನಡ್ ಎಂದರೆ ಅದಕ್ಕೊಂದು ಕಾರಣವಿರುತ್ತದೆ. ಆದರೆ ನೀವು ಹೈದರಾಬಾದ್ ಮೂಲದವರಾಗಿದ್ದುಕೊಂಡು ಕನ್ನಡ್ ಅಂತಿದ್ದೀರಲ್ಲ? ಅದು ಕನ್ನಡ್ ಅಲ್ಲ. ಕನ್ನಡ ಎಂದು ಹೇಳಿ’ ಎಂದು ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಆತನಿಗೆ ಕನ್ನಡ ಎಂದು ಸರಿಯಾಗಿ ಹೇಳಿಸಿ ತಪ್ಪು ತಿದ್ದಿದ್ದಾರೆ.

ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜವಾದ ಕನ್ನಡ ಅಭಿಮಾನ ಎಂದರೆ ಇದುವೇ ಎಂದಿದ್ದಾರೆ. ಈ ಹಿಂದೆಯೂ ಒಮ್ಮೆ ಕನ್ನಡ್ ಎಂದ ಹಿಂದಿ ವ್ಯಕ್ತಿಗೆ ಸುದೀಪ್ ಇದೇ ರೀತಿ ಕನ್ನಡ ಎಂದು ಹೇಳಿಸಿ ಕನ್ನಡ ಪ್ರೇಮ ಮೆರೆದಿದ್ದರು. ಇದೀಗ ಮತ್ತೊಮ್ಮೆ ಅದೇ ಕೆಲಸ ಮಾಡಿ ಮನಗೆದ್ದಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments