ಅಂತೂ ನಮ್ಮ ಬಾಸ್ ಬಂದ್ರು: ಬಿಗ್ ಬಾಸ್ ಪ್ರೋಮೋ ನೋಡಿ ಖುಷಿಯಾದ ಕಿಚ್ಚ ಸುದೀಪ್ ಫ್ಯಾನ್ಸ್

Krishnaveni K
ಸೋಮವಾರ, 16 ಸೆಪ್ಟಂಬರ್ 2024 (10:11 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಕಿಚ್ಚ ಸುದೀಪ್ ಇರಲ್ಲ ಎಂಬ ಅನುಮಾನಗಳಿಗೆ ಈಗ ಉತ್ತರ ಸಿಕ್ಕಿದೆ. ಬಿಬಿಕೆ 11 ಪ್ರೋಮೋ ಬಿಡುಗಡೆಯಾಗಿದ್ದು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುವುದು ಪಕ್ಕಾ ಆಗಿದೆ.

ಬಿಗ್ ಬಾಸ್ ಕನ್ನಸ ಸೀಸನ್ 11ರಲ್ಲಿ ಸುದೀಪ್ ಇರಲ್ಲ. ಅವರ ಬದಲು ಬೇರೆ ನಟರು ನಿರೂಪಣೆ ಮಾಡಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಓಡಾಡುತ್ತಿತ್ತು. ಇದರಿಂದ ಸುದೀಪ್ ಅಭಿಮಾನಿಗಳಿಗೆ ಬೇಸರವಾಗಿತ್ತು. ಸುದೀಪ್ ಇಲ್ಲದೇ ಇದ್ದರೆ ನಾವು ಶೋ ನೋಡಲ್ಲ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಮತ್ತೆ ಕೆಲವರು ಸುದೀಪ್ ಇಲ್ಲದೇ ಇದ್ದರೆ ಅದು ಸಿಂಹನಿಲ್ಲದ ಕಾಡಿನಂತೆ. ಆ ಶೋಗೆ ಕಳೆಯೇ ಇರಲ್ಲ. ಅವರ ಹೊರತಾಗಿ ಬೇರೆ ಯಾರೇ ನಿರೂಪಣೆ ಮಾಡಿದರೂ ಬಿಗ್ ಬಾಸ್ ಶೋ ಹಿಟ್ ಆಗಲ್ಲ ಎನ್ನುತ್ತಿದ್ದರು. ಇದೀಗ ಕೊನೆಗೂ ಸುದೀಪ್ ಅವರೇ ಬಿಬಿಕೆ11 ನಿರೂಪಣೆ ಮಾಡುವುದು ಕನ್ ಫರ್ಮ್ ಆಗಿದೆ.

ನಿನ್ನೆ ಗಿಚ್ಚಿ ಗಿಲಿ ಗಿಲಿ ಶೋ ಫೈನಲ್ ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಬಾರಿ ಮತ್ತಷ್ಟು ಹೊಸತನದೊಂದಿಗೆ ಶೋ ಮಾಡಲು ಬಿಗ್ ಬಾಸ್ ಟೀಂ ತಯಾರಿ ನಡೆಸಿದೆ. ಈ ತಿಂಗಳ ಅಂತ್ಯಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗುವ ನಿರೀಕ್ಷೆಯಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments