ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11 ಶುರುವಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ರಿಲೀಸ್ ಆಗಿರುವ ಫ್ರೋಮೋ ಸಾಕಷ್ಟು ಕುತೂಹಲವನ್ನು ಹುಟ್ಟಿಸಿದೆ. ಪ್ರತಿ ಬಿಗ್‌ಬಾಸ್ ಸೀಸನ್ ಶುರುವಾಗ ಸ್ಪರ್ಧಿಗಳ ಎಂಟ್ರಿ ಬಗ್ಗೆ ಭಾರೀ ಕುತೂಹಲ ಇರುತ್ತದೆ. ಆದರೆ ಈ ಬಾರಿ ನಿರೂಪಕ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಕುತೂಹಲವನ್ನು ಪ್ರೋಮೋದಲ್ಲೂ ಹೇಳಲಾಗಿದೆ.
ಇನ್ನೂ ಸಿಕ್ಕಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 29ರಂದು ಬಿಗ್‌ಬಾಸ್ ಶೋ ಶುರುವಾಗಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದ್ದು, ಅದರಲ್ಲಿ ಸೆಪ್ಟೆಂಬರ್ 27ರಂದು ಸ್ಪರ್ಧಿಗಳ ಡ್ಯಾನ್ಸ್ ಶೂಟಿಂಗ್ ನಡೆಯಲಿದೆ. ಸ್ಪರ್ಧಿಗಳು 28ರಂದು ದೊಡ್ಮನೆಗೆ ಎಂಟ್ರಿಯಾಗಲಿದ್ದಾರೆ. ಶೋ 29ರಂದು ಟೆಲಿಕಾಸ್ಟ್ ಆಗಲಿದೆ ಎನ್ನಲಾಗಿದೆ.
ಒಟ್ಟಾರೆ ಬಿಗ್‌ಬಾಸ್ ಎಂಟ್ರಿಯಾಗುತ್ತಿರುವ ಸ್ಪರ್ಧಿಗಳ ಬಗ್ಗೆ 28ರಂದು ಪಕ್ಕಾ ಮಾಹಿತಿ ಸಿಗಲಿದೆ. ವೈರಲ್ ಆಗುತ್ತಿರುವ ಪೋಸ್ಟರ್ ನೋಡಿದ ಬಿಗ್‌ಬಾಸ್ ಪ್ರಿಯರು ನಮಗೆ ಸ್ಪರ್ಧಿಗಳು ಮ್ಯಾಟರ್ ಆಗಲ್ಲ, ನಮಗೆ ಏನಿದ್ದರೂ ಸುದೀಪ್ ಅಷ್ಟೇ ಮ್ಯಾಟರ್ ಎಂದಿದ್ದಾರೆ. ಮತ್ತೊಬ್ಬರು ನಾನು ಬಿಗ್‌ಬಾಸ್ ಶೋ ಆರಂಭಕ್ಕೆ ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ.