Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ 11 ಪ್ರೋಮೋ ಔಟ್: ಕಿಚ್ಚ ಸುದೀಪ್ ಇಲ್ಲದೇ ನಾವು ನೋಡಲ್ಲ ಎಂದ ಫ್ಯಾನ್ಸ್

Big Boss Kannada 11

Krishnaveni K

ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2024 (09:46 IST)
Photo Credit: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿರುವ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ರ ಪ್ರೋಮೋ ಬಿಡುಗಡೆಯಾಗಿದೆ. ಇದನ್ನು ನೀಡದ ತಕ್ಷಣ ಅಭಿಮಾನಿಗಳು ಕಿಚ್ಚ ಸುದೀಪ್ ಗಾಗಿ ಡಿಮ್ಯಾಂಡ್ ಮಾಡಿದ್ದಾರೆ.

ಕಳೆದ 10 ಸೀಸನ್ ಗಳಿಂದಲೂ ಸುದೀಪ್ ಅವರೇ ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದರು. ಆದರೆ ಈ ಬಾರಿ ಸುದೀಪ್ ಶೋನಿಂದ ಹೊರಗುಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು.

ಇದೀಗ ಪ್ರೋಮೋ ಹೊರಬೀಳುತ್ತಿದ್ದಂತೇ ನೆಟ್ಟಿಗರು ಕಿಚ್ಚ ಸುದೀಪ್ ಗಾಗಿಯೇ ನಾವು ಈ ಶೋ ನೋಡೋದು. ಒಂದು ವೇಳೆ ಅವರು ಇಲ್ಲಾಂದ್ರೆ ನಾವು ಈ ಶೋ ನೋಡಲ್ಲ. ಕಿಚ್ಚ ಸುದೀಪ್ ರನ್ನೇ ಈ ಬಾರಿಯೂ ಕರೆಸಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಸುದೀಪ್ ಇದ್ದರೇ ಈ ಶೋಗೆ ಒಂದು ಖದರ್ ಎಂಬುದು ವೀಕ್ಷಕರ ಅಭಿಪ್ರಾಯ.

ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಸುದೀಪ್ ಈ ಶೋಗಾಗಿ ನಾನು ತುಂಬಾ ಸಮಯ ಕೊಡಬೇಕಾಗುತ್ತದೆ. ನನಗಾಗಿ ಸಮಯ ಸಿಗುತ್ತಿಲ್ಲ, ಸಿನಿಮಾಗೂ ಸಮಯ ಕೊಡಲು ಆಗುತ್ತಿಲ್ಲ ಎಂದಿದ್ದರು. ಹಾಗಿದ್ದರೂ ಈ ಬಾರಿಯೂ ಅವರೇ ಹೋಸ್ಟ್ ಮಾಡಲಿದ್ದಾರೆ ಎನ್ನಲಾಗಿದೆ. ಇದೀಗ ಹೊರಬಿಟ್ಟಿರುವ ಪ್ರೋಮೋದಲ್ಲಿ ಕೇವಲ ಲೋಗೋ ಮಾತ್ರ ಲಾಂಚ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Happy Birthday Kiccha Sudeep: ಮನೆ ಮುಂದೆ ಬಂದವರಿಗಾಗಿ ಬಿಲ್ಡಿಂಗ್ ಏರಿ ಕೈ ಬೀಸಿದ ಕಿಚ್ಚ ಸುದೀಪ್