Publish Date: Sun, 11 Apr 2021 (09:14 IST)
Updated Date: Sun, 11 Apr 2021 (09:15 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಏಪ್ರಿಲ್ 15 ರಂದು ಸರ್ಪೈಸ್ ಒಂದು ಕಾದಿದೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಪ್ರಕಟಿಸಿದ್ದಾರೆ.
ಸುದೀಪ್ ಅಭಿನಯಿಸಿರುವ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಏಪ್ರಿಲ್ 15 ರಂದು ಬೆಳಿಗ್ಗೆ 11.10 ಗಂಟೆಗೆ ವಿಶೇಷ ಸುದ್ದಿಯೊಂದನ್ನು ನೀಡುವುದಾಗಿ ಪ್ರಕಟಣೆ ಬಂದಿದೆ. ಆ ಸುದ್ದಿ ವಿಕ್ರಾಂತ್ ರೋಣ ಹಾಡು ಅಥವಾ ಟ್ರೈಲರ್ ಬಿಡುಗಡೆ ಬಗ್ಗೆ ಇರಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದಾರೆ.
ಜನವರಿ 31 ಕ್ಕೆ ದುಬೈನ ಬುರ್ಜ್ ಖಲೀಫಾದಲ್ಲಿ ಕಿಚ್ಚ ಸುದೀಪ್ ಚಿತ್ರ ಜೀವನದ 25 ನೇ ವರ್ಷಾಚರಣೆ ಪ್ರಯುಕ್ತ ಚಿತ್ರತಂಡ ಟೈಟಲ್ ಟೀಸರ್ ಒಂದನ್ನು ಬಿಡುಗಡೆ ಮಾಡಿತ್ತು. ಇದೀಗ ಯಾವ ಸರ್ಪೈಸ್ ಕಾದಿದೆಯೋ ನೋಡಬೇಕಿದೆ.