ಬೆಂಗಳೂರು: ಕಿಚ್ಚ ಸುದೀಪ್ ಈಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಸುದೀಪ್ ವಿಡಂಬನಾತ್ಮಕ ಸಂದೇಶವೊಂದನ್ನು ಟ್ವೀಟ್ ಮಾಡಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ಪ್ರತಿದಿನವೂ ದೇವರ ಉಡುಗೊರೆ ಎಂದೇ ತಿಳಿದುಕೊಳ್ಳಬೇಕು ಎಂದು ಸುದೀಪ್ ಕಿವಿ ಮಾತು ಹೇಳಿದ್ದಾರೆ.
ಪ್ರತಿನಿತ್ಯವೂ ನಿಮಗೆ ಸಿಕ್ಕ ಉಡುಗೊರೆ ಎಂದುಕೊಳ್ಳಿ. ಪ್ರತಿದಿನವೂ ನಿಮಗೆ ಸಿಕ್ಕ ಆಶೀರ್ವಾದ ಎಂದುಕೊಳ್ಳಿ. ಪ್ರತಿನಿತ್ಯ ನೀವು ನಗುತ್ತಾ ಇದ್ದರೆ ಅದುವೇ ದೊಡ್ಡ ಉಡುಗೊರೆ ಎಂದುಕೊಳ್ಳಿ. ನಿಮ್ಮನ್ನು ಅರಸಿ ಬರುವ ಪ್ರತಿ ಕರೆಗಳು, ಸಂದೇಶಗಳು..ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿವಹಿಸುವವರ ಬಗ್ಗೆ ಪ್ರೀತಿ ಇರಲಿ ಸುದೀಪ್ ಹೇಳಿದ್ದಾರೆ.