Publish Date: Thu, 20 Aug 2020 (09:47 IST)
Updated Date: Thu, 20 Aug 2020 (09:49 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಫ್ಯಾಂಟಮ್ ಸಿನಿಮಾದ ಒಂದೊಂದೇ ಕ್ಯಾರೆಕ್ಟರ್ ಬಗ್ಗೆ ಪೋಸ್ಟರ್ ಮೂಲಕ ಚಿತ್ರತಂಡ ಜನರಿಗೆ ಪರಿಚಯ ಮಾಡಿಸುತ್ತಿದೆ.
ಇದೀಗ ಕಿಚ್ಚ ಇಂದು ಫ್ಯಾಂಟಮ್ ಸಿನಿಮಾದ ‘ಪನ್ನ’ ಎನ್ನುವ ಮಹಿಳಾ ಪಾತ್ರಧಾರಿಯ ಪರಿಚಯ ಮಾಡಿಸಲಿದ್ದಾರಂತೆ. ಇಂದು 10 ಗಂಟೆಗೆ ಈ ಹೊಸ ಪಾತ್ರ ಪೋಸ್ಟರ್ ಬಿಡುಗಡೆಯಾಗಲಿದೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ವಿಶೇಷ ಮಾಹಿತಿಯನ್ನೂ ನೀಡಲಿದ್ದಾರೆ.
ಈಗಾಗಲೇ ಫ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ಹೊರತಾಗಿ ಪ್ರಮುಖ ಪಾತ್ರ ಮಾಡುತ್ತಿರುವ ನಿರೂಪ್ ಭಂಡಾರಿ ಪಾತ್ರವನ್ನು ಪೋಸ್ಟರ್ ಲಾಂಚ್ ಮಾಡುವ ಮೂಲಕ ಪರಿಚಯಿಸಲಾಗಿದೆ. ಇದೀಗ ಹೊಸದಾಗಿ ಲಾಂಚ್ ಆಗಲಿರುವ ಪಾತ್ರಧಾರಿ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.