Publish Date: Wed, 19 Aug 2020 (11:18 IST)
Updated Date: Wed, 19 Aug 2020 (11:19 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಜೋಗಿ’ ಸಿನಿಮಾ ರಿಲೀಸ್ ಆಗಿ 15 ವರ್ಷ ಕಳೆದ ಹಿನ್ನಲೆಯಲ್ಲಿ ನಟಿ ರಕ್ಷಿತಾ ಪ್ರೇಮ್ ತಮ್ಮ ಗಂಡ ಪ್ರೇಮ್ ನಿರ್ದೇಶನದ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.
ಜೋಗಿ ಸಿನಿಮಾಗೆ 15 ವರ್ಷವಾದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಿಡಿಪಿ ಬಿಡುಗಡೆ ಮಾಡಲಾಗಿದೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರಕ್ಷಿತಾ ಪ್ರೇಮ್ ನನ್ನ ಗಂಡನ ಈ ಸಿನಿಮಾ ಬಗ್ಗೆ ನನಗೆ ಎಂದೆಂದಿಗೂ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ.
ಪ್ರೇಮ್ ಮಾಡಿದ ಅತ್ಯದ್ಭುತ ಸಿನಿಮಾವೆಂದರೆ ಇದು. ಯಾವತ್ತೂ ನನಗೆ ಅವರ ಬಗ್ಗೆ ಹೆಮ್ಮೆಯಿದೆ. ಶಿವರಾಜ್ ಕುಮಾರ್ ಅಣ್ಣನ ‘ಮಾದೇಶ’ ಪಾತ್ರ, ಗುರುಕಿರಣ್ ಅವರ ಮ್ಯಾಜಿಕಲ್ ಸಂಗೀತ ಯಾರು ತಾನೇ ಮರೆಯಲು ಸಾಧ್ಯ? ದಿಗ್ಗಜರ ತಂಡವೇ ಇತ್ತು. ಈ ಸುಂದರ ನೆನಪುಗಳಿಗೆ ಧನ್ಯವಾದಗಳು ಎಂದು ರಕ್ಷಿತಾ ಸ್ಮರಿಸಿಕೊಂಡಿದ್ದಾರೆ.