Publish Date: Mon, 13 Sep 2021 (09:57 IST)
Updated Date: Mon, 13 Sep 2021 (09:59 IST)
ಬೆಂಗಳೂರು: ಕೊರೋನಾ ಬಂದ ಬಳಿಕ ಕೆಲವು ದಿನ ವಿಶ್ರಾಂತಿ ಪಡೆದಿದ್ದ ಕಿಚ್ಚ ಸುದೀಪ್ ಈಗ ಮತ್ತೆ ಜಿಮ್ ಕಡೆಗೆ ಮುಖ ಮಾಡಿದ್ದಾರೆ.
ಮತ್ತೆ ವರ್ಕೌಟ್ ಶುರು ಮಾಡಿರುವುದಾಗಿ ಸುದೀಪ್ ಹೇಳಿಕೊಂಡಿದ್ದಾರೆ. ಕೊರೋನಾ ಬಂದ ಮೇಲೆ ಸುಧಾರಿಸಲು ತಿಂಗಳೇ ಬೇಕಾಯಿತು. ಈಗ ಮತ್ತೆ ನಾನು ಇಷ್ಟಪಟ್ಟು ಮಾಡುತ್ತಿದ್ದ ವರ್ಕೌಟ್ ಮಾಡಲು ಪ್ರಯತ್ನಿಸುತ್ತಿರುವೆ. ಮತ್ತೆ ನನ್ನ ದೈನಂದಿನ ಬದುಕಿಗೆ ಮರಳಲು ಖುಷಿಯಾಗುತ್ತಿದೆ. ನನಗೆ ಬೆಂಬಲವಾಗಿ ನಿಂತ ವೈದ್ಯರು, ಕುಟುಂಬದವರಿಗೆ ಧನ್ಯವಾದಗಳು ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಸುದೀಪ್ ಅಭಿನಯದ ಕೋಟಿಗೊಬ್ಬ 3, ವಿಕ್ರಾಂತ್ ರೋಣ ರಿಲೀಸ್ ಗೆ ರೆಡಿಯಾಗಿದೆ. ಮತ್ತಷ್ಟು ಹೊಸ ಸಿನಿಮಾಗಳ ಘೋಷಣೆ ಸದ್ಯದಲ್ಲೇ ನಡೆಯಲಿದೆ.