Publish Date: Mon, 13 Sep 2021 (09:02 IST)
Updated Date: Mon, 13 Sep 2021 (09:25 IST)
ಬೆಂಗಳೂರು: ಶೂಟಿಂಗ್ ನಿಂದ ಸಿಕ್ಕ ಬಿಡುವಿನ ವೇಳೆಯನ್ನು ಗೋಲ್ಡನ್ ಸ್ಟಾರ್ ಗಣೇಶ್ ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ಕುಟುಂಬ ಸಮೇತ ಕಬಿನಿ ಅರಣ್ಯ ಪ್ರದೇಶದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಪತ್ನಿ ಶಿಲ್ಪಾ ಗಣೇಶ್, ಮಕ್ಕಳು ಮತ್ತು ಸ್ನೇಹಿತರ ಕುಟುಂಬದೊಂದಿಗೆ ಗಣೇಶ್ ಪ್ರವಾಸ ಮಾಡಿದ್ದಾರೆ.
ಕೊರೋನಾದಿಂದಾಗಿ ಕಳೆದ ಕೆಲವು ಸಮಯದಿಂದ ಎಲ್ಲೂ ಹೊರಹೋಗಲು ಸಾಧ‍್ಯವಾಗಿಲ್ಲ. ಈಗ ಸಿಕ್ಕ ಬಿಡುವಿನ ವೇಳೆಯನ್ನು ಗಣೇಶ್ ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾ ಮುಗಿಸಿರುವ ಗಣೇಶ್ ಕೈಯಲ್ಲಿರುವ ಇನ್ನೊಂದು ಸಿನಿಮಾ ಸಖತ್ ಶೂಟಿಂಗ್ ಹಂತದಲ್ಲಿದೆ. ಅದರ ನಡುವೆ ರಿಯಾಲಿಟಿ ಶೋ ಒಂದರಲ್ಲೂ ಕಾಣಿಸಿಕೊಳ್ಳಲಿದ್ದಾರೆ.