Publish Date: Mon, 13 Sep 2021 (08:45 IST)
Updated Date: Mon, 13 Sep 2021 (09:18 IST)
ಬೆಂಗಳೂರು: ಕಳೆದ ಎರಡು ದಿನಗಳಿಂದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಅಣ್ಣನ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಧ್ರುವ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಚಿರಂಜೀವಿ ಸರ್ಜಾ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಿದ್ದು, ಅಣ್ಣನ ನೆನಪು ಕಾಡುತ್ತಿದೆ ಎಂದಿದ್ದಾರೆ.
ವಿಡಿಯೋವೊಂದನ್ನು ಪ್ರಕಟಿಸಿರುವ ಧ‍್ರುವ ಅಣ್ಣನ ಜೊತೆಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ನಿನ್ನೆ ಬಿಟ್ಟಿರಲು ಕಷ್ಟವಾಗುತ್ತಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಚಿರು ಪತ್ನಿ, ನಟಿ ಮೇಘನಾ ಕೂಡಾ ಇಬ್ಬರೂ ಸಹೋದರರ ಆಪ್ತತೆ ಯಾವ ಮಟ್ಟಿಗಿತ್ತು ಎಂಬುದನ್ನು ಹಂಚಿಕೊಂಡಿದ್ದರು. ಚಿರು ಇಲ್ಲದೇ ಧ್ರುವ ಕೊಂಚ ಮಂಕಾಗಿದ್ದಾರೆ ಎಂದಿದ್ದರು.