Publish Date: Tue, 04 Jun 2019 (10:28 IST)
Updated Date: Tue, 04 Jun 2019 (19:43 IST)
ಬೆಂಗಳೂರು: ಕಿಚ್ಚ ಸುದಿಪ್ ಅಭಿನಯದ ಪೈಲ್ವಾನ್ ಸಿನಿಮಾದ ಬಾಕ್ಸಿಂಗ್ ಪೋಸ್ಟರ್ ಇಂದು ಬಿಡುಗಡೆಯಾಗುತ್ತಿದೆ. ಆದರೆ ಇದನ್ನು ಬಿಡುಗಡೆ ಮಾಡುತ್ತಿರುವುದು ಯಾರು ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.
ಸ್ವತಃ ನಿರ್ದೇಶಕ ಕೃಷ್ಣ ಪೋಸ್ಟರ್ ಬಿಡುಗಡೆ ಮಾಡುತ್ತಿರುವ ದಿಗ್ಗಜರ ಹೆಸರು ಬಹಿರಂಗಪಡಿಸಿದ್ದಾರೆ. ಆ ಮೂಲಕ ತಮ್ಮ ಚಿತ್ರಕ್ಕೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಅಷ್ಟಕ್ಕೂ ಪೈಲ್ವಾನ್ ಪೋಸ್ಟರ್ ಬಿಡುಗಡೆ ಮಾಡಲು ಯಾವೆಲ್ಲಾ ಸಿನಿ ದಿಗ್ಗಜರು ಒಂದಾಗುತ್ತಿದ್ದಾರೆ ಗೊತ್ತಾ?
ಬಾಲಿವುಡ್ ನಟ ಸುನಿಲ್ ಶೆಟ್ಟಿ, ಮೆಗಾಸ್ಟಾರ್ ಚಿರಂಜೀವಿ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ತಮಿಳು ಸ್ಟಾರ್ ವಿಜಯ್ ಸೇತು ಜತೆಗೆ ಕಿಚ್ಚ ಸುದೀಪ್ ಸೇರಿದಂತೆ ಐವರು ಸ್ಟಾರ್ ಗಳು ಐದು ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಹೀಗಾಗಿ ಇಂದು ಸಂಜೆ ನಾಲ್ಕು ಗಂಟೆ ಯಾವಾಗ ಆಗುತ್ತೋ ಎಂದು ಕಿಚ್ಚ ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.