Publish Date: Tue, 04 Jun 2019 (09:31 IST)
Updated Date: Tue, 04 Jun 2019 (09:33 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ನಿನ್ನೆಯೇ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಾಕ್ಸಿಂಗ್ ಪೋಸ್ಟರ್ ಬಿಡುಗಡೆಯಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಇದನ್ನು ಮುಂದೂಡಲಾಗಿದೆ.
ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿ ಕಾರಣಾಂತರಗಳಿಂದ ಪೋಸ್ಟರ್ ಬಿಡುಗಡೆಯನ್ನು ಸ್ವಲ್ಪ ಮುಂದಕ್ಕೆ ಹಾಕಲಾಗಿದೆ. ಜೂನ್ 4 ರಂದು ಅಂದರೆ ಇಂದು ನಾಲ್ಕು ಗಂಟೆಗೆ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.
ಕಿಚ್ಚನ ಪೈಲ್ವಾನ್ ಲುಕ್ ಗಾಗಿ ಕಾಯುತ್ತದ್ದ ಅಭಿಮಾನಿಗಳಿಗೆ ಇದು ತೀವ್ರ ಅಸಮಾಧಾನ ತಂದಿದೆ. ಇನ್ನೂ ಎಷ್ಟು ಹೊತ್ತು ಕಾಯಬೇಕಣ್ಣಾ? ಒಂದು ಪೋಸ್ಟರ್ ಬಿಡುಗಡೆಗೆ ಇಷ್ಟೊಂದು ಸಮಯ ಬೇಕಾ? ಎಂದು ಕಿಚ್ಚನ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.