Select Your Language

Notifications

webdunia
webdunia
webdunia
webdunia

ತಮಿಳು, ತೆಲುಗಿನಿಂದಾಗಿ ಕನ್ನಡ ಚಿತ್ರರಂಗ ಉದ್ದಾರ ಆಗಿಲ್ಲ: ಸುದೀಪ್ ಖಡಕ್ ಮಾತು

ತಮಿಳು, ತೆಲುಗಿನಿಂದಾಗಿ ಕನ್ನಡ ಚಿತ್ರರಂಗ ಉದ್ದಾರ ಆಗಿಲ್ಲ: ಸುದೀಪ್ ಖಡಕ್ ಮಾತು
ಬೆಂಗಳೂರು , ಸೋಮವಾರ, 8 ಫೆಬ್ರವರಿ 2021 (10:56 IST)
ಬೆಂಗಳೂರು: ಬೇರೆ ಭಾಷೆಯಿಂದಾಗಿ ನಮ್ಮ ಚಿತ್ರರಂಗ ಇತ್ತೀಚೆಗಿನ ದಿನಗಳಲ್ಲಿ ಬೇರೆ ಲೆವೆಲ್ ಗೆ ಹೋಗಿಲ್ಲ. ಕನ್ನಡಕ್ಕೆ ಕನ್ನಡದ್ದೇ ಆದ ನೆಲೆ, ಸ್ಥಾನ-ಮಾನವಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.


ತಮ್ಮ ಚಿತ್ರಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಮಾಧ‍್ಯಮಗಳೊಂದಿಗೆ ಮಾತನಾಡಿದ ಸುದೀಪ್, ಕನ್ನಡ ಸಿನಿಮಾ ಈಗ ಬೇರೆ ಭಾಷೆಗಳಲ್ಲೂ ಮಿಂಚುತ್ತಿದೆ. ಇದರಿಂದಾಗಿ ನಮ್ಮ ಸಿನಿಮಾದ ಲೆವೆಲ್ ಬೇರೆಯಾಗಿದೆ ಎಂದು ನಿಮಗನಿಸುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ‘ತಮಿಳು, ತೆಲುಗು, ಭಾಷೆಗಳಿಂದಾಗಿ ನಮ್ಮ ಸಿನಿಮಾ ಬೇರೆ ಮಟ್ಟಕ್ಕೆ ಹೋಗಿದ್ದಲ್ಲ. ಕನ್ನಡ ಸಿನಿಮಾಗೆ ಅದರದ್ದೇ ಆದ ಸ್ಥಾನ ಮಾನವಿದೆ. ಅಂದು ಎಲ್ಲರೂ ಓಡುತ್ತಿದ್ದರು, ನಾವು ನಡೆಯುತ್ತಿದ್ದೆವು. ಈಗ ನಾವೂ ಓಡಲು ಆರಂಭಿಸಿದ್ದೇವೆ. ಇದಕ್ಕೆ ಹಲವರು ಕಾರಣ. ಆ ಯಶಸ್ಸಿನಲ್ಲಿ ನಾವೂ ಭಾಗಿಯಾಗೋಣ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿಗೆ ಒಳಗಾದ ತಮಿಳು ನಟ ಸೂರ್ಯ