ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಿಂದೊಮ್ಮೆ ರಾಕಿಂಗ್ ಸ್ಟಾರ್ ಯಶ್ ಯಾರು ಎಂದು ಕೇಳಿ ವಿವಾದಕ್ಕೀಡಾಗಿದ್ದರು. ಆದರೆ ಈಗ ರಶ್ಮಿಕಾ ತಮಗೆ ಮುಂದೊಂದು ದಿನ ಯಶ್ ಜೊತೆಗೆ ಅಭಿನಯಿಸುವ ಆಸೆಯಿದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಪೊಗರು ಸಿನಿಮಾ ಪ್ರಚಾರಕ್ಕಾಗಿ ಮಾಧ‍್ಯಮವೊಂದರ ಸಂದರ್ಶನದಲ್ಲಿ ಯಶ್ ಮತ್ತು ಕೆಜಿಎಫ್ ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸರುವ ರಶ್ಮಿಕಾ ಕೆಜಿಎಫ್ ನಮ್ಮೆಲ್ಲರ ಹೆಮ್ಮೆ. ಆ ಸಿನಿಮಾವನ್ನು ಸಪೋರ್ಟ್ ಮಾಡುವುದು ನಮ್ಮ ಕರ್ತವ್ಯ. ಪ್ರಶಾಂತ್ ಸರ್, ಯಶ್ ಸರ್ ಜೊತೆ ಕೆಲಸ ಮಾಡುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.