ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಅಡಿಯೋ ಲಾಂಚ್ ಫೆಬ್ರವರಿ 14 ರಂದು ದಾವಣಗೆರೆಯಲ್ಲಿ ನಡೆಯಲಿದೆ.
ಈ ಅಡಿಯೋ ರಿಲೀಸ್ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲು ಚಿತ್ರತಂಡ ಚಿಂತನೆ ನಡೆಸಿದೆ. ಇದಕ್ಕಾಗಿ ಸ್ಟಾರ್ ನಟರನ್ನೇ ಅತಿಥಿಗಳಾಗಿ ಆಹ್ವಾನಿಸಲು ಯೋಜನೆ ರೂಪಿಸಿದೆ. ಮೂಲಗಳ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಥವಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಡಿಯೋ ರಿಲೀಸ್ ಗೆ ಮುಖ್ಯ ಅತಿಥಿಯಾಗಲಿದ್ದಾರೆ. ಆದರೆ ಯಾವೆಲ್ಲಾ ಸ್ಟಾರ್ ಗಳ ಆಗಮನವಾಗಲಿದೆ ಎನ್ನುವುದು ಇನ್ನೂ ಕನ್ ಫರ್ಮ್ ಆಗಿಲ್ಲ.