ಬೆಂಗಳೂರು: ಈ ವರ್ಷ ಮತ್ತೆ ಕಿಚ್ಚ ಸುದೀಪ್ ತಮ್ಮದೇ ನಿರ್ದೇಶನದಲ್ಲಿ ಹೊಸ ಸಿನಿಮಾ ಮಾಡಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಅದೀಗ ಸದ್ಯಕ್ಕಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಚಿತ್ರರಂಗಕ್ಕೆ ಬಂದು 25 ವರ್ಷಗಳಾದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮಾಧ‍್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುದೀಪ್, ತಮ್ಮ ನಿರ್ದೇಶನದ ಸಿನಿಮಾ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ವಿಕ್ರಾಂತ್ ರೋಣ ಮಾಡುವ ಮೊದಲು ನಿರ್ದೇಶನ ಮಾಡೋಣ ಅಂತಲೇ ಅಂದ್ಕೊಂಡಿದ್ದೆ. ಆದರೆ ಅನೂಪ್ ಭಂಡಾರಿ ಎಲ್ಲಾ ಹಾಳು ಮಾಡಿದರು. ಅವರು ವಿಕ್ರಾಂತ್ ರೋಣನಂತಹ ಅದ್ಭುತ ಸಿನಿಮಾ ಮಾಡಿದ ಮೇಲೆ ಬೇರೆ ಬೇರೆ ಭಾಷೆಯ ಹಲವರು ನನ್ನಲ್ಲಿ ದಿನಕ್ಕೊಂದು ಅದ್ಭುತ ಕತೆಯೊಂದಿಗೆ ಸಿನಿಮಾ ಮಾಡೋಣ ಅಂತ ಬರ್ತಿದ್ದಾರೆ. ಸದ್ಯಕ್ಕೆ ಈ ಹೊಸ ಕತೆಗಳಿಗೆ, ಅದನ್ನು ನನಗಾಗಿ ಬರೆದುಕೊಂಡು ಬರುತ್ತಿರುವವರ ಕಲ್ಪನೆಗೆ ಬಣ್ಣ ಹಚ್ಚೋಣ ಅಂತಿದ್ದೇನೆ ಎಂದು ತಮ್ಮದೇ ಶೈಲಿಯಲ್ಲಿ ಸುದೀಪ್ ಉತ್ತರಿಸಿದ್ದಾರೆ.