Publish Date: Tue, 06 Oct 2020 (09:32 IST)
Updated Date: Tue, 06 Oct 2020 (09:34 IST)
ಬೆಂಗಳೂರು: ಕಿಚ್ಚ ಸುದೀಪ್ ಕಾಲಿವುಟ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಭೇಟಿಯಾಗಿದ್ದು, ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿರುವ ಕಿಚ್ಚ ಬ್ಯುಸಿ ಶೆಡ್ಯೂಲ್ ನಡುವೆ ಪವನ್ ಕಲ್ಯಾಣ್ ರನ್ನು ಸೌಹಾರ್ದಯುತ ಭೇಟಿಯಾಗಿದ್ದು, ಗಿಡವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಬಳಿಕ ಪವನ್ ತುಂಬಾ ಸರಳ ವ್ಯಕ್ತಿ, ಅವರನ್ನು ಭೇಟಿಯಾಗಿದ್ದು ಖುಷಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇಬ್ಬರೂ ದಿಗ್ಗಜ ನಟರನ್ನು ಒಂದೇ ಫ್ರೇಮ್ ನಲ್ಲಿ ನೋಡಿ ಅಭಿಮಾನಿಗಳೂ ಸಂತಸ ವ್ಯಕ್ತಪಡಿಸಿದ್ದಾರೆ.