Select Your Language

Notifications

webdunia
webdunia
webdunia
webdunia

ವಿಡಿಯೋ ಲೀಕ್ ಮಾಡದಂತೆ ಎಚ್ಚರಿಕೆ ಕೊಟ್ಟ ನಟಿ ಆಶಿಕಾ ರಂಗನಾಥ್

ವಿಡಿಯೋ ಲೀಕ್ ಮಾಡದಂತೆ ಎಚ್ಚರಿಕೆ ಕೊಟ್ಟ ನಟಿ ಆಶಿಕಾ ರಂಗನಾಥ್
ಬೆಂಗಳೂರು , ಸೋಮವಾರ, 5 ಅಕ್ಟೋಬರ್ 2020 (11:35 IST)
ಬೆಂಗಳೂರು: ಮದಗಜ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದ್ದು, ಈ ಕುರಿತ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ.


ಆದರೆ ಕೆಲವರು ಚಿತ್ರೀಕರಣದ ದೃಶ್ಯಗಳನ್ನೂ ಲೀಕ್ ಮಾಡುತ್ತಿರುವ ಬಗ್ಗೆ ನಾಯಕಿ ಆಶಿಕಾ ರಂಗನಾಥ್ ಮನವಿ ಮಾಡಿದ್ದಾರೆ. ‘ಸಾಮಾಜಿಕ ಜಾಲತಾಣಗಳಲ್ಲಿ ಮದಗಜ ಸಿನಿಮಾದ ದೃಶ್ಯಗಳನ್ನು, ವಿಡಿಯೋಗಳನ್ನು ಲೀಕ್ ಮಾಡುತ್ತಿರುವುದನ್ನು ಗಮನಿಸಿದ್ದೇವೆ. ದಯವಿಟ್ಟು ಇಂತಹ ವಿಡಿಯೋ, ಫೋಟೋ ಕಂಡರೆ ರಿಪೋರ್ಟ್ ಮಾಡಿ, ಯಾರೂ ಶೇರ್ ಮಾಡಬೇಡಿ’ ಎಂದು ಆಶಿಕಾ ಕೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ಪತ್ನಿಗೆ ನಿರ್ದೇಶಕ ಪವನ್ ಒಡೆಯರ್ ಹಾಡಿನ ಗಿಫ್ಟ್