Publish Date: Tue, 06 Oct 2020 (09:23 IST)
Updated Date: Tue, 06 Oct 2020 (09:24 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಬರ್ತ್ ಡೇ ಸಂಭ್ರಮ. ಆದರೆ ಅಣ್ಣ ಚಿರು ಸರ್ಜಾ ಅಕಾಲಿಕ ನಿಧನದ ದುಃಖದಲ್ಲಿರುವ ಧ್ರುವ ಈ ಬಾರಿ ಹುಟ್ಟುಹಬ್ಬದ ಆಚರಣೆಯೇ ಬೇಡವೆಂದಿದ್ದಾರೆ.
ಬದಲಾಗಿ ಹುಟ್ಟುಹಬ್ಬದ ದಿನವೂ ತಮ್ಮ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇನ್ನು, ಧ್ರುವ ಪತ್ನಿ ಪ್ರೇರಣಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪತಿಗೆ ಶುಭ ಕೋರಿದ್ದಾರೆ. ಚಿರು ಸರ್ಜಾ ಫೋಟೋ ಮುಂಭಾಗ ತಾವಿಬ್ಬರೂ ಇರುವ ಫೋಟೋವನ್ನು ಪ್ರಕಟಿಸಿ ಶುಭ ಕೋರಿದ್ದಾರೆ.