ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳ ಕರೆಗೆ ಎಂದಿಗೂ ನಿರಾಸೆ ಮಾಡುವುದಿಲ್ಲ. ಇದೀಗ ಪುಟ್ಟ ಬಾಲಕಿಯ ಬಹುದಿನಗಳ ಕನಸು ನನಸು ಮಾಡಿದ್ದಾರೆ.
ಕ್ಯಾನ್ಸರ್ ಪೀಡಿತ ಸಾಕ್ಷಿ ಎಂಬ ಬಾಲಕಿಗೆ ಕಿಚ್ಚ ಸುದೀಪ್ ಎಂದರೆ ಅಚ್ಚುಮೆಚ್ಚು. ಅವರನ್ನು ಒಮ್ಮೆ ನೋಡಬೇಕೆಂದು ಆಕೆ ಬಯಸಿದ್ದಳು. ಅದರಂತೆ ಸುದೀಪ್ ಆಕೆಯ ಆಸೆ ಈಡೇರಿಸಿದ್ದಾರೆ.
ನೇರವಾಗಿ ಆಕೆಯನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದ ಕಿಚ್ಚ ಉಡುಗೊರೆ ಮತ್ತು ಆಟೋಗ್ರಾಫ್ ನೀಡಿ ಆಕೆಯ ಜೊತೆ ಕೆಲ ಕಾಲ ಕಳೆದು ಖುಷಿ ನೀಡಿದ್ದಾರೆ.