Select Your Language

Notifications

webdunia
webdunia
webdunia
webdunia

ಹೆಣ್ಣು ಮಗುವಿಗೆ ತಂದೆಯಾದ ನಿರ್ದೇಶಕ ಪವನ್ ಒಡೆಯರ್

ಹೆಣ್ಣು ಮಗುವಿಗೆ ತಂದೆಯಾದ ನಿರ್ದೇಶಕ ಪವನ್ ಒಡೆಯರ್
ಬೆಂಗಳೂರು , ಬುಧವಾರ, 5 ಜುಲೈ 2023 (16:29 IST)
Photo Courtesy: Twitter
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ಒಡೆಯರ್ ಎರಡನೇ ಬಾರಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಪತ್ನಿ ಅಪೇಕ್ಷಾ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ.

ಪವನ್ ಮತ್ತು ಅಪೇಕ್ಷಾ ದಂಪತಿಗೆ ಈಗಾಗಲೇ ಒಂದು ಗಂಡು ಮಗುವಿದೆ. ಈಗ ಎರಡನೇ ಮಗುವಾಗಿದ್ದು, ಹೆಣ್ಣು ಮಗುವಾಗಿರುವ ವಿಚಾರವನ್ನು ಪವನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಪವನ್ ಸೋಷಿಯಲ್ ಮೀಡಿಯಾ ಮೂಲಕ ಎರಡನೇ ಬಾರಿಗೆ ತಂದೆಯಾಗುತ್ತಿರುವುದಾಗಿ ಸಂಭ್ರಮ ಹಂಚಿಕೊಂಡಿದ್ದರು. ಇದೀಗ ಮಗಳು ಹುಟ್ಟಿದ ಸಂಭ್ರಮದಲ್ಲಿರುವ ಪವನ್ ಗೆ ಫ್ಯಾನ್ಸ್ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಡಲತಡಿಯ ಪ್ರತಿಭೆ ರಾಜ್ ಬಿ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ