Publish Date: Wed, 05 Jul 2023 (09:10 IST)
Updated Date: Wed, 05 Jul 2023 (09:12 IST)
ಬೆಂಗಳೂರು: ಕನ್ನಡ ಸಿನಿಮಾ ರಂಗದ ತ್ರಿಬಲ್ ಆರ್ ಗಳ ಪೈಕಿ ರಾಜ್ ಬಿ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ.
ಒಂದು ಮೊಟ್ಟೆಯ ಕತೆ ಎನ್ನುವ ಸಿನಿಮಾ ಮೂಲಕ ಜನರ ಮನಗೆದ್ದು, ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ ಇಂದು ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನ, ನಟನೆ, ಬರವಣಿಗೆಯಿಂದ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಅವರು ಇಂದು 36 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಸಿನಿಮಾ ನಾಯಕನಾಗಲು ಸ್ಪರುದ್ರೂಪಿಯೇ ಆಗಿರಬೇಕು, ಸಿಕ್ಸ್ ಪ್ಯಾಕ್ ಇರಬೇಕು ಎಂಬೆಲ್ಲಾ ಸಿದ್ದ ಸೂತ್ರಗಳನ್ನು ಹುಸಿ ಮಾಡಿ ಮಿಂಚಿದ ಹೀರೋ ಅವರು. ಕನ್ನಡ ಚಿತ್ರರಂಗದ ಅಸಾಧಾರಣ ಪ್ರತಿಭೆ ಎಂದು ನಿರೂಪಿಸಿರುವ ರಾಜ್ ಬಿ ಶೆಟ್ಟಿ ಇದುವರೆಗೆ ಮಾಡಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್. ಇದೀಗ ಟೋಬಿ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅವರಿಗೆ ಟೋಬಿ ಸಕ್ಸಸ್ ಮೂಲಕ ಭರ್ಜರಿ ಉಡುಗೊರೆ ಸಿಗುವಂತಾಗಲಿ ಎಂದು ಹಾರೈಸೋಣ.