Publish Date: Sun, 27 Aug 2023 (07:10 IST)
Updated Date: Sun, 27 Aug 2023 (07:17 IST)
ಬೆಂಗಳೂರು: ಇಂದು ಸುಮಲತಾ ಅಂಬರೀಶ್ ಜನ್ಮದಿನವಿದ್ದು, ಇದೇ ದಿನ ಸ್ಯಾಂಡಲ್ ವುಡ್ ನ ಒಂದು ಕಾಲದ ಸ್ನೇಹಿತರಾಗಿದ್ದ ಕಿಚ್ಚ ಸುದೀಪ್-ದರ್ಶನ್ ಒಂದಾಗುವ ಸಾಧ‍್ಯತೆಯಿದೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ದರ್ಶನ್ ನಿರ್ದೇಶಕ ಪ್ರೇಮ್ ಜೊತೆಗೆ ಮತ್ತು ಮಾಧ‍್ಯಮಗಳ ಜೊತೆಗಿನ ಮುನಿಸು ಮರೆತು ಒಂದಾಗಿದ್ದರು. ಇದೀಗ ದೂರವಾಗಿರುವ ಕಿಚ್ಚ ಸುದೀಪ್ ಮತ್ತು ದರ್ಶನ್ ಒಂದಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇಂದು ಸುಮಲತಾ ಅಂಬರೀಶ್ ತಮ್ಮ ಜನ್ಮದಿನದ ಸಂಭ್ರಮಾಚರಣೆಗೆ ಇಬ್ಬರೂ ಸ್ಟಾರ್ ಗಳನ್ನು ಆಹ್ವಾನಿಸಿದ್ದು, ಅವರ ಮಧ‍್ಯಸ್ಥಿಕೆಯಲ್ಲೇ ಇಬ್ಬರೂ ಒಂದಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಇದು ಅಭಿಮಾನಿಗಳಿಗೆ ನಿಜಕ್ಕೂ ಖುಷಿಯ ವಿಚಾರವಾಗಲಿದೆ.