Daily Horoscope
✕

ಕಿಚ್ಚ ಸುದೀಪ್ ಗೆ ಇಂದು ಜನ್ಮದಿನದ ಸಂಭ್ರಮ

Webdunia
ಶುಕ್ರವಾರ, 2 ಸೆಪ್ಟಂಬರ್ 2022 (08:10 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಜನ್ಮದಿನದ ಸಂಭ್ರಮ. ಸಹಜವಾಗಿಯೇ ಈ ಬಾರಿ ಕೊರೋನಾ ಭೀತಿಯೂ ಇಲ್ಲದೇ ಇರುವುದರಿಂದ ಫ್ಯಾನ್ಸ್ ಅದ್ಧೂರಿಯಾಗಿಯೇ ಕಿಚ್ಚನ ಹುಟ್ಟುಹಬ್ಬ ಆಚರಿಸಲು ತಯಾರಿ ನಡೆಸಿದ್ದಾರೆ.

ಸುದೀಪ್ ಹುಟ್ಟುಹಬ್ಬದ ದಿನವಾದ ಇಂದು ವಿಕ್ರಾಂತ್ ರೋಣ ಒಟಿಟಿಯಲ್ಲಿ ಪ್ರಸಾರ ಆರಂಭಿಸುತ್ತಿದೆ. ಇದರ ಹೊರತಾಗಿ ಹೊಸ ಸಿನಿಮಾಗಳು ಘೋಷಣೆಯಾಗುವ ಸೂಚನೆ ಇಲ್ಲ.

ಆದರೆ ಕಿಚ್ಚ ಸುದೀಪ್ ಈಗಾಗಲೇ ಕೆಲವೊಂದು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದು, ಈ ವರ್ಷ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತಷ್ಟು ಸಿನಿಮಾ ಸಿಗುವುದಂತೂ ಗ್ಯಾರಂಟಿ. ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾ ಜೊತೆಗೆ, ಅನೂಪ್ ಭಂಡಾರಿ ಜೊತೆ ಸುದೀಪ್ ಮತ್ತೊಂದು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರುವ ಸಾಧ‍್ಯತೆಯಿದೆ.

ಇನ್ನು,  ಈ ಬಾರಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಪುರಿಯ ಓಂ ಬೀಚ್ ನಲ್ಲಿ ಮರಳಿನಲ್ಲಿ ಸುದೀಪ್ ಕಲಾಕೃತಿ ನಿರ್ಮಿಸಿ ಶುಭ ಕೋರಲಾಗಿದೆ. ಇದಲ್ಲದೆ, ವಿಶೇಷ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸತಿ ಪತಿಗಳಾದ ಅಮೃತಧಾರೆ ಖ್ಯಾತಿಯ ಕಿರುತೆರೆ ಜೋಡಿ ರಾಧಾ ಭಗವತಿ, ರಾಣವ್

ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಸೂಪರ್ ಸ್ಟಾರ್ ಮೋಹನ್ ಲಾಲ್: ಕೇರಳದಲ್ಲಿ ಫುಲ್ ಹಲ್ ಚಲ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪುನೀತ್ ಬೆನ್ನಲ್ಲೇ ಮತ್ತೊಬ್ಬ ಪ್ರತ್ಯಕ್ಷ ಸಾಕ್ಷಿ ಕಿರಣ್ ಉಲ್ಟಾ; ದರ್ಶನ್ ಗೇನು ಲಾಭ

ಅಭಿಮಾನಿಗಳ ಕೇಳಿದ್ರೆ ಬಿಡೋದು ಹೇಗೆ… ವಿಮಾನವನ್ನೇ ಮಿನಿ ಸಂಗೀತ ಕಚೇರಿಯನ್ನಾಗಿ ಬದಲಾಯಿಸಿದ ಗಾಯಕ ಸೋನು ನಿಗಮ್ Video

BBK13: ಜಗಳ ನೋಡಿ ಸಾಕಾಯ್ತು, ತಾಂಡವ್ ರಾಮ್ ಗೆ ಇನ್ನಷ್ಟು ಹಾಡಲು ಹೇಳಿ.. ವೀಕ್ಷಕರ ಬೇಡಿಕೆ

ಮುಂದಿನ ಸುದ್ದಿ
Show comments