Select Your Language

Notifications

webdunia
webdunia
webdunia
webdunia

ರಣ ರಣ ರಾವಣ… ಕಿಚ್ಚನ ಬರ್ತ್ ಡೇಗೆ `ದಿ ವಿಲನ್’ ಮೋಷನ್ ಪೋಸ್ಟರ್ ಗಿಫ್ಟ್

ರಣ ರಣ ರಾವಣ… ಕಿಚ್ಚನ ಬರ್ತ್ ಡೇಗೆ `ದಿ ವಿಲನ್’ ಮೋಷನ್ ಪೋಸ್ಟರ್ ಗಿಫ್ಟ್
ಬೆಂಗಳೂರು , ಶನಿವಾರ, 2 ಸೆಪ್ಟಂಬರ್ 2017 (13:44 IST)
ಬೆಂಗಳೂರು: ತುಂಬಾ ಕುತೂಹಲದಿಂದ ಕಾಯುತ್ತಿದ್ದ `ದಿ ವಿಲನ್’ ಚಿತ್ರದ ಮೋಶನ್ ಪೋಸ್ಟರ್ ಕಿಚ್ಚನ ಬರ್ತ್ ಡೇಗೆ ರಿಲೀಸ್ ಆಗಿದೆ. ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ಮೊದಲ ಚಿತ್ರ ಇದು. ಹೀಗಾಗಿ ಈ ಸಿನಿಮಾ ಗಾಂಧಿನಗರದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.
ರಣ ರಣ ರಾವಣ ಎಂಬ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಶುರುವಾಗುತ್ತಿದ್ದಂತೆ, ಶಿವಣ್ಣನ ಮುಖದಲ್ಲಿ ಸುದೀಪ್ ಹಾಗೂ ಕಿಚ್ಚ ಸುದೀಪ್ ಮುಖದಲ್ಲಿ ಶಿವಣ್ಣನ ಮುಖ ಕಳಚಿ ಬೀಳುತ್ತದೆ. ಇಲ್ಲಿಯೂ ಕಥೆ ಬಿಟ್ಟು ಕೊಟ್ಟಿಲ್ಲ. ಪ್ರತಿ ರಾಮನೊಳಗೆ ರಾವಣ, ಪ್ರತಿ ರಾವಣನಲ್ಲೂ ರಾಮನೊಬ್ಬ ಇರುತ್ತಾನೆ ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರ ಇರಬಹುದು ಎಂದು ಊಹಿಸಿಕೊಳ್ಳಬಹುದು.
 
ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರಕ್ಕೆ ನಿರ್ಮಾಪಕ ಸಿ.ಆರ್.ಮನೋಹರ್ ಬಂಡವಾಳ ಹಾಕಿದ್ದಾರೆ. ಒಟ್ಟನಲ್ಲಿ ಸುದೀಪ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಈ ವಿಶೇಷ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಶುಭ ಕೋರಿದ್ದು, ಅಭಿಮಾನಿಗಳಿಗೂ ಸೂಪರ್ ಗಿಫ್ಟ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಲಂಬೂ ನಾಗೇಶ್ ಇನ್ನಿಲ್ಲ