Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಸೀಸನ್ 5ಕ್ಕೆ ಕೌಂಟ್ ಡೌನ್ ಶುರು

ಬಿಗ್ ಬಾಸ್ ಸೀಸನ್ 5ಕ್ಕೆ ಕೌಂಟ್ ಡೌನ್ ಶುರು
ಬೆಂಗಳೂರು , ಮಂಗಳವಾರ, 29 ಆಗಸ್ಟ್ 2017 (13:36 IST)
ಬೆಂಗಳೂರು: ಬಿಗ್ ಬಾಸ್… ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಅತಿದೊಡ್ಡ ರಿಯಾಲಿಟಿ ಶೋ… ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಕರನ್ನ ಹೊಂದಿರುವ ಶೋ.. ಸೀಸನ್ 4 ಮುಗಿದಿದ್ದು, ಈಗ ಸೀಸನ್ 5ರ ಆವೃತ್ತಿಗೆ ದಿನಗಣನೆ ಶುರುವಾಗಿದೆ.

ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋ ಇದೇ ಸೆಪ್ಟೆಂಬರ್ 23ರಿಂದ ಅಥವಾ ಅಕ್ಟೋಬರ್ ಮೊದಲ ವಾರದಿಂದ ಪ್ರಸಾರವಾಗಲಿದೆ. ಈ ಬಾರಿಯೂ ಕಿಚ್ಚ ಸುದೀಪ್ ಕಾರ್ಯಕ್ರಮವನ್ನ ಹೋಸ್ಟ್ ಮಾಡಲಿದ್ದಾರೆ.

ಎಲ್ಲಾ ಸೀಸನ್ ಗಳಿಗಿಂತ 5ನೇ ಸೀಸನ್ ತೀವ್ರ ಕುತೂಹಲ ಕೆರಳಿಸಿದೆ. ಯಾಕಂದ್ರೆ ಪ್ರತಿ ಸೀಸನ್ ನಲ್ಲೂ ಸಿನಿರಂಗದ ಹಿರಿಯರು, ಗ್ಲಾಮರಸ್ ನಟಿಯರು, ವಿವಾದಾತ್ಮಕ ಕಲಾವಿದರು ಹೀಗೆ ಹಲವರು ಭಾಗವಹಿಸುತ್ತಿದ್ದರು. ಆದರೆ ಈ ಬಾರಿಯ ಸೀಸನ್ ನಲ್ಲಿ ಕಾಮನ್ ಮ್ಯಾನ್ ಸಹ ಇರಲಿದ್ದಾನೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಸೀಸನ್ ಸಖತ್ ಕ್ರೇಜ್ ಹುಟ್ಟಿಸಿದೆ.

ಈಗಾಗಲೇ ಹಲವರು ತಮ್ಮ ಹೆಸರುಗಳನ್ನ ರಿಜಿಸ್ಟರ್ ಮಾಡಿಸಿದ್ದು, ಕೆಲವರ ಹೆಸರು ಪಕ್ಕಾ ಆಗಿದೆ ಎನ್ನಲಾಗ್ತಿದೆ. ಆದರೆ ಈ ಬಾರಿ ಯಾರ್ಯಾರು ಹೋಗ್ತಾರೆ ಅನ್ನೋದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ಪ್ರಕರಣ: ದಿಲೀಪ್ ಜಾಮೀನು ತಿರಸ್ಕೃತ