Publish Date: Tue, 28 Jul 2020 (13:25 IST)
Updated Date: Tue, 28 Jul 2020 (13:26 IST)
ಬೆಂಗಳೂರು: ಬಿಗ್ ಬಾಸ್ ಶೋ ವೇದಿಕೆಯಲ್ಲಿ ಕಿಚ್ಚ ಸುದೀಪ್ ಸದಸ್ಯರಿಗೆ ನಿಮ್ಮ ಜತೆ ನಾನು ಯಾವಾಗಲೂ ಇರ್ತೀನಿ ಎಂದು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಇದನ್ನು ಅವರು ಕೇವಲ ಬಾಯಿ ಮಾತಿಗೆ ಹೇಳಿಲ್ಲ. ಕೃತಿಯಲ್ಲೂ ಹಲವು ಬಾರೀ ಸಾಬೀತುಪಡಿಸಿದ್ದಾರೆ.
ಹುಚ್ಚ ವೆಂಕಟ್ ಇರಬಹುದು, ಈಗ ಜಯಶ್ರೀ ರಾಮಯ್ಯ ಇರಬಹುದು. ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಸಂಕಷ್ಟಕ್ಕೀಡಾದ ಇವರೆಲ್ಲರಿಗೂ ಕಿಚ್ಚ ಸುದೀಪ್ ಅಣ್ಣನಂತೇ ನೆರಳಾಗಿ ನಿಂತಿದ್ದಾರೆ.
ಮಾನಸಿಕ ಅಸ್ವಸ್ಥರಾಗಿರುವ ಹುಚ್ಚ ವೆಂಕಟ್ ಬೀದಿಯಲ್ಲಿ ಹೊಡೆಸಿಕೊಂಡು ಹೀನಾಯ ಸ್ಥಿತಿಯಲ್ಲಿದ್ದಾಗ ಕಿಚ್ಚ ತಮ್ಮ ಫೌಂಡೇಷನ್ ಮೂಲಕ ಅವರಿಗೆ ನೆರವಾಗಲು ಮುಂದೆ ಬಂದಿದ್ದರು. ಇದೀಗ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದ ಜಯಶ್ರೀ ರಾಮಯ್ಯಗೂ ತಮ್ಮ ತಂಡವನ್ನು ಕಳುಹಿಸಿ ಆರ್ಥಿಕವಾಗಿ ಮಾತ್ರವಲ್ಲದೇ, ಮಾನಸಿಕವಾಗಿಯೂ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಜಯಶ್ರೀ ಕಿಚ್ಚನಿಗೆ ಧನ್ಯವಾದ ಸಲ್ಲಿಸಿದ್ದಾರೆ.