ಸಲ್ಮಾನ್ ಖಾನ್ ದಾರಿ ಹಿಡಿದ ಕಿಚ್ಚ ಸುದೀಪ್! ಸೈಕಲ್ ಸವಾರಿಗೆ ಜನ ಫಿದಾ

ಶುಕ್ರವಾರ, 29 ನವೆಂಬರ್ 2019 (09:14 IST)
ಬೆಂಗಳೂರು: ಕಿಚ್ಚ ಸುದೀಪ್ ಆಗಾಗ ಅಭಿಮಾನಿಗಳಿಗೆ ಚಮಕ್ ಕೊಡುತ್ತಿರುತ್ತಾರೆ. ಇದೀಗ ಸೈಕಲ್ ಸವಾರಿ ಮಾಡಿದ ವಿಡಿಯೋ ಪ್ರಕಟಿಸಿದ್ದು ಅದು ವೈರಲ್ ಆಗಿದೆ.


ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಲೆಗೆ ಟೋಪಿ ಧರಿಸಿ ಗುರುತೇ ಸಿಗದಂತೆ ಮಾಡಿ ಸೈಕಲ್ ತುಳಿದುಕೊಂಡು ಶೂಟಿಂಗ್ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಕಿಚ್ಚ ಫಿಟ್ ಆಗಿರಿ ಎಂದಿದ್ದಾರೆ.

ಇದೇ ರೀತಿ ಬಾಲಿವುಡ್‍ ನಟ ಸಲ್ಮಾನ್ ಖಾನ್ ಕೂಡಾ ಶೂಟಿಂಗ್ ಗೆ ಹೋಗುವಾಗ ಸೈಕಲ್ ಸವಾರಿ ಮಾಡಿ ಸುದ್ದಿಯಾಗಿದ್ದರು. ಇದೀಗ ದಬಾಂಗ್ 3 ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದಾರೆ. ಹೀಗಾಗಿ ಕಿಚ್ಚನ ಸೈಕಲ್ ಸವಾರಿಗೆ ಸಲ್ಮಾನ್ ಖಾನ್ ಸ್ಪೂರ್ತಿಯೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ವಿಶೇಷವೆಂದರೆ ಸೈಕಲ್ ಸವಾರಿ ಮಾಡುವಾಗ ಮುಖ ಮುಚ್ಚಿಕೊಂಡಿದ್ದರಿಂದ ಜನರು ಯಾರೂ ಗುರುತು ಹಿಡಿಯಲಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಬ್ರಹ್ಮಚಾರಿ’, ‘ಮುಂದಿನ ನಿಲ್ದಾಣ’ ಇಂದು ತೆರೆಗೆ