Select Your Language

Notifications

webdunia
webdunia
webdunia
webdunia

ಮಗಳಿಗಾಗಿ ಜೊತೆಯಾಗಿ ಹಾಡಿದ ಕಿಚ್ಚ ಸುದೀಪ್ ದಂಪತಿ: ಬರ್ತ್ ಡೇಗೆ ಹಾಡಿನ ಗಿಫ್ಟ್

ಮಗಳಿಗಾಗಿ ಜೊತೆಯಾಗಿ  ಹಾಡಿದ ಕಿಚ್ಚ ಸುದೀಪ್ ದಂಪತಿ: ಬರ್ತ್ ಡೇಗೆ ಹಾಡಿನ ಗಿಫ್ಟ್
ಬೆಂಗಳೂರು , ಗುರುವಾರ, 21 ಮೇ 2020 (09:54 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಪುತ್ರಿ ಸಾನ್ವಿಯ ಬರ್ತ್ ಡೇಯನ್ನು ವಿಶೇಷವಾಗಿಸಿದ್ದಾರೆ. ನಿನ್ನೆ ಹುಟ್ಟು ಹಬ್ಬ ಆಚರಿಸಿಕೊಂಡ ಮಗಳಿಗೆ ಕಿಚ್ಚ ದಂಪತಿ ಹಾಡಿನ ಗಿಫ್ಟ್ ಕೊಟ್ಟಿದ್ದಾರೆ.


ಸಾನ್ವಿಗಾಗಿ ‘ನೆನ್ನೆ ಮೊನ್ನೆ ಇದ್ದ ಹಾಗಿದೆ’ ಎಂದು ಆರಂಭವಾಗುವ ಹಾಡಿನ ಸಾಲನ್ನು ವಾಸುಕಿ ವೈಭವ್ ಬರೆದು ಸಂಗೀತ ಸಂಯೋಜಿಸಿದ್ದಾರೆ. ಈ ಹಾಡಿಗೆ ಕಿಚ್ಚ ತಮ್ಮ ಮಗಳ ಜತೆಗಿನ ಹಳೆಯ ವಿಡಿಯೋ, ಅಡಿಯೋ ಸೇರಿಸಿ ಸುಂದರ ಆಲ್ಬಮ್ ಮಾಡಿರುವುದು ನಿರ್ದೇಶಕ ಅನೂಪ್ ಭಂಡಾರಿ.

ವಿಶೇಷವೆಂದರೆ ಈ ಮಗಳ ಕುರಿತಾದ ಈ ಸುಂದರ ಹಾಡನ್ನು ಸ್ವತಃ ಕಿಚ್ಚ ಸುದೀಪ್ ಹಾಡಿದ್ದು, ಅವರ ಜತೆಗೆ ಪತ್ನಿ ಪ್ರಿಯಾ ಕೂಡಾ ಇದೇ ಮೊದಲ ಬಾರಿಗೆ ಹಾಡಿದ್ದಾರೆ. ಅಪ್ಪ-ಅಮ್ಮ ಇಬ್ಬರೂ ಸೇರಿಕೊಂಡು ಹಾಡಿದ ಈ ಸುಂದರ ಹಾಡು ಎಲ್ಲಾ ಅಪ್ಪ-ಮಗಳಿಗೂ ಅನ್ವಯವಾಗುವಂತಿದೆ. ಕಿಚ್ಚ ಕ್ರಿಯೇಷನ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ನವಾಜುದ್ದೀನ್ ಸಿದ್ದಿಕಿ: ವಿಚ್ಛೇದನಕ್ಕೆ ಕಾರಣ ನೀಡಿದ ಪತ್ನಿ