ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ನವಾಜುದ್ದೀನ್ ಸಿದ್ದಿಕಿ: ವಿಚ್ಛೇದನಕ್ಕೆ ಕಾರಣ ನೀಡಿದ ಪತ್ನಿ

ಗುರುವಾರ, 21 ಮೇ 2020 (09:43 IST)
ಮುಂಬೈ: ಬಾಲಿವುಡ್ ನಲ್ಲಿ ಮತ್ತೊಬ್ಬ ತಾರೆಯ ದಾಂಪತ್ಯ ಬದುಕು ಮುರಿದು ಬಿದ್ದಿದೆ. ನಟ ನವಾಜುದ್ದೀನ್ ಸಿದ್ಧಿಕಿ ಮತ್ತು ಪತ್ನಿ ಅಂಜನಾ ವಿಚ್ಛೇದನದ ಹಾದಿ ಹಿಡಿದಿದ್ದಾರೆ. ಅಂಜನಾ ಈಗಾಗಲೇ ನವಾಜುದ್ದೀನ್ ಗೆ ವಿಚ್ಛೇದನ ನೋಟಿಸ್ ನೀಡಿದ್ದಾರೆ. ಆದರೆ ಇದಕ್ಕೆ ನಟನ ಕಡೆಯಿಂದ ಉತ್ತರ ಬಂದಿಲ್ಲ.


ಆದರೆ ಅಂಜನಾ ಮಾತ್ರ ತಾವಿ ನವಾಜುದ್ದೀನ್ ಅವರಿಂದ ಎಷ್ಟೆಲ್ಲಾ ಹಿಂಸೆ ಅನುಭವಿಸುತ್ತಿದ್ದೆ ಎಂಬುದನ್ನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಲ್ಲದೆ, ತನಗೆ ಇನ್ನು ಆತನ ಜತೆ ಬದುಕುವ ಆಸೆಯೂ ಇಲ್ಲ ಎಂದು ಹೇಳಿದ್ದಾರೆ.

‘ನವಾಜುದ್ದೀನ್ ಯಾವತ್ತೂ ನನ್ನ ಮೇಲೆ ಕೈ ಮಾಡಿರಲಿಲ್ಲ. ಆದರೆ ಮಾನಸಿಕ ಹಿಂಸೆ ವಿಪರೀತವಾಗಿತ್ತು. ನನ್ನ ಮೇಲೆ ಕೂಗಾಡುವುದು, ನನ್ನನ್ನು ಮಾನಸಿಕವಾಗಿ ಹಿಂಸೆ ನೀಡುವುದು ಮಾಡುತ್ತಿದ್ದರು. ಅವರ ಸಹೋದರ ನನ್ನ ಮೇಲೆ ಕೈ ಮಾಡಿದ್ದ ಕೂಡಾ. ನನಗೆ ಏಕಾಂಗಿ ಎನಿಸುತ್ತಿತ್ತು. ಕಳೆದ ಮೂರು-ನಾಲ್ಕು ತಿಂಗಳಿನಿಂದ ಮಕ್ಕಳನ್ನೂ ನವಾಜುದ್ದೀನ್ ನೋಡಲು ಬಂದಿರಲಿಲ್ಲ. ಹೀಗಾಗಿ ಮಕ್ಕಳನ್ನೂ ನನ್ನ ವಶಕ್ಕೆ ಒಪ್ಪಿಸಬೇಕೆಂದು ಕೋರುತ್ತೇನೆ. ಈ ವೈವಾಹಿಕ ಬಂಧನದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲವೆನಿಸಿ ಹೊರಬಂದೆ’ ಎಂದು ಅಂಜನಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲಾಕ್ ಡೌನ್ ಹೊಡೆತಕ್ಕೆ ಸಿಲುಕಿದ ಮತ್ತಷ್ಟು ಧಾರವಾಹಿಗಳು