ವಲಸೆ ಕಾರ್ಮಿಕರಿಗೆ ಮತ್ತಷ್ಟು ಬಸ್ ಸೇವೆ ಒದಗಿಸಿದ ನಟ ಸೋನು ಸೂದ್

ಸೋಮವಾರ, 18 ಮೇ 2020 (09:44 IST)
ಮುಂಬೈ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ತೆರಳಲಿದ್ದ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದ ನಟ ಸೋನು ಸೂದ್ ಈಗ ಮತ್ತಷ್ಟು ಕಾರ್ಮಿಕರ ನೆರವಿಗೆ ಮುಂದೆ ಬಂದಿದ್ದಾರೆ.


ಈ ಬಾರಿ ಉತ್ತರ ಪ್ರದೇಶದ ಕಾರ್ಮಿಕರ ನೆರವಿಗೆ ಸೋನು ಮತ್ತಷ್ಟು ಬಸ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಇದಕ್ಕಾಗಿ ಖುದ್ದಾಗಿ ಉತ್ತರ ಪ್ರದೇಶ ಸರ್ಕಾರದಿಂದ ವಿಶೇಷ ಅನುಮತಿಯನ್ನೂ ಪಡೆದುಕೊಂಡಿದ್ದಾರೆ.

‘ಕಾರ್ಮಿಕರು ತಮ್ಮ ಕುಟುಂಬದಿಂದ ಬೇರೆಯಾಗಿ ತಮ್ಮ ಮನೆ ತಲುಪಲು ನೂರಾರು ಮೈಲಿ ನಡೆದಾಡುವುದನ್ನು ನೋಡಲು ನನ್ನಿಂದ ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬ ಕಾರ್ಮಿಕನೂ ತಮ್ಮ ಕುಟುಂಬ ಸೇರುವವರೆಗೆ ನನ್ನ ಕೈಲಾದಷ್ಟು ಬಸ್ ಸೇವೆ ಮಾಡುವೆ’ ಎಂದು ಸೋನು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆ ದಿನ ಆಹಾರ ಕಿಟ್ ವಿತರಿಸಿದ ಅಭಿಮಾನಿಗೆ ಕಿಚ್ಚ ಸುದೀಪ್ ಮೆಚ್ಚುಗೆ