Publish Date: Wed, 29 Jul 2020 (09:21 IST)
Updated Date: Wed, 29 Jul 2020 (09:23 IST)
ಬೆಂಗಳೂರು: ಕೆಜಿಎಫ್ 2 ನಲ್ಲಿ ಪ್ರಮುಖ ಪಾತ್ರ ಮಾಡಿರುವ ಬಾಲಿವುಡ್ ನಟ ಸಂಜಯ್ ದತ್ ಬರ್ತ್ ಡೇ ಇಂದು. ಕೆಜಿಎಫ್ 2 ನೇ ಭಾಗದಲ್ಲಿ ಸಂಜಯ್ ಪಾತ್ರ ಹೇಗಿರಲಿದೆ ಎಂಬ ಕುತೂಹಲಕ್ಕೆ ಇಂದು ಒಂದು ರೀತಿಯ ಉತ್ತರ ಸಿಗಲಿದೆ.
ಕೆಜಿಎಫ್ 2 ನಲ್ಲಿ ನಾಯಕ ರಾಕಿಂಗ್ ಸ್ಟಾರ್ ಯಶ್. ಹಾಗಿದ್ದರೂ ಸಹ ನಟರಿಗೂ ಅಷ್ಟೇ ಪ್ರಾಮುಖ್ಯತೆಯಿದೆ. ಹೀಗಾಗಿ ಯಶ್ ಇರಲಿ, ಬೇರೆ ಯಾರೇ ಇರಲಿ, ಕೆಜಿಎಫ್ ತಂಡದಿಂದ ಏನೇ ಅಪ್ ಡೇಟ್ ಬರುತ್ತದೆ ಎಂದರೂ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗುತ್ತದೆ.
ಹಾಗೆಯೇ ಇಂದು ಸಂಜಯ್ ದತ್ ಹುಟ್ಟಿದ ಹಬ್ಬದ ಪ್ರಯುಕ್ತ ಅಧೀರ ಪಾತ್ರದ ಅನಾವರಣವಾಗಲಿದ್ದು, ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ 10 ಗಂಟೆಗೆ ಅಧೀರನ ಲುಕ್ ಲಾಂಚ್ ಆಗಲಿದೆ.