Select Your Language

Notifications

webdunia
webdunia
webdunia
webdunia

ಬಿಡುಗಡೆಗೂ ಮೊದಲು ತೆಲುಗಿನಲ್ಲಿ ಕೆಜಿಎಫ್ 2 ಎಷ್ಟು ಹಣ ಕೊಳ್ಳೆ ಹೊಡೆಯುತ್ತಿದೆ ಗೊತ್ತಾ?

ಬಿಡುಗಡೆಗೂ ಮೊದಲು ತೆಲುಗಿನಲ್ಲಿ ಕೆಜಿಎಫ್ 2 ಎಷ್ಟು ಹಣ ಕೊಳ್ಳೆ ಹೊಡೆಯುತ್ತಿದೆ ಗೊತ್ತಾ?
ಬೆಂಗಳೂರು , ಗುರುವಾರ, 13 ಫೆಬ್ರವರಿ 2020 (09:30 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಆದರೆ ಈಗಾಗಲೇ ಈ ಸಿನಿಮಾ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಬಾರೀ ಬೇಡಿಕೆಯಿದೆ.


ಕೆಜಿಎಫ್ 1 ರ ನಂತರ ಆಂಧ‍್ರದಲ್ಲೂ ರಾಕಿಂಗ್ ಸ್ಟಾರ್ ಯಶ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಕೆಜಿಎಫ್ 2 ಸಿನಿಮಾ ಬಿಡುಗಡೆಗಾಗಿ ಅಲ್ಲೂ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮೂಲಗಳ ಪ್ರಕಾರ ಕೆಜಿಎಫ್ 2 ನ ತೆಲುಗು ವರ್ಷನ್ ಹಕ್ಕು ಬರೋಬ್ಬರಿ 30 ಅಥವಾ 40 ಕೋಟಿ ರೂ.ಗೆ ಸೇಲ್ ಆಗುತ್ತಿದೆಯಂತೆ. ಅಂದರೆ ಇದು ಕನ್ನಡ ಸಿನಿಮಾ ಪೈಕಿ ಭಾರೀ ದಾಖಲೆಯಾಗಲಿದೆ. ಇದುವರೆಗೆ ಯಾವ ಕನ್ನಡ ಸಿನಿಮಾವೂ ಇಷ್ಟು ದುಬಾರಿ ಮೊತ್ತಕ್ಕೆ ಬೇರೆ ಭಾಷೆಗೆ ಮಾರಾಟವಾಗಿರಲಿಲ್ಲ. ಈ ಮೂಲಕ ಕೆಜಿಎಫ್ 2 ಬಿಡುಗಡೆಗೂ ಮೊದಲೇ ಭಾರೀ ಹವಾ ಸೃಷ್ಟಿಸಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಭಟ್ರ ಸಾಹಿತ್ಯದಲ್ಲಿ ಅರಳಿದ ‘ಆನೆಬಲ’ ಚಿತ್ರದ ಸುಂದರ ಹಾಡು..!! ಚೆಂದದಭಾವನೆ ಲಿರಿಕಲ್ ವಿಡಿಯೋ ರಿಲೀಸ್