Publish Date: Mon, 21 Dec 2020 (08:57 IST)
Updated Date: Mon, 21 Dec 2020 (08:59 IST)
ಬೆಂಗಳೂರು: ಎಲ್ಲರೂ ನಿರೀಕ್ಷೆ ಮಾಡುತ್ತಿರುವ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಹೈದರಾಬಾದ್ ನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ವಾಪಸಾಗಿದ್ದಾರೆ.
ಇಂದು ಚಿತ್ರತಂಡ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡುವುದಾಗಿ ಈಗಾಗಲೇ ಘೋಷಿಸಿದೆ. ಹೈದರಾಬಾದ್ ನಲ್ಲಿ ಸಂಜಯ್ ದತ್ ಮತ್ತು ಯಶ್ ನಡುವಿನ ಕ್ಲೈಮ್ಯಾಕ್ಸ್ ಶೂಟಿಂಗ್ ಮುಕ್ತಾಯವಾಗಿದ್ದು, ಇದರೊಂದಿಗೆ ಕೆಜಿಎಫ್ ಚಿತ್ರೀಕರಣದ ಕೆಲಸಗಳು ಮುಗಿದಿವೆ. ಜನವರಿ 8 ರಂದು ಚಿತ್ರದ ಟೀಸರ್ ಹೊರಬರಲಿದೆ.