Publish Date: Sun, 28 Apr 2019 (09:54 IST)
Updated Date: Sun, 28 Apr 2019 (09:57 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾದ ಮೊದಲ ಸಿನಿಮಾ ಕವಲು ದಾರಿ. ಹೊಸಬರ ತಂಡದೊಂದಿಗೆ ಹಿರಿಯ ನಟ ಅನಂತ್ ನಾಗ್ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದರು.
ಈ ಸಿನಿಮಾ ವಿಮರ್ಶಕರು, ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿದೆ. ಅದರಲ್ಲೂ ಹೊಸಬರ ಸಿನಿಮಾವೊಂದು ಕೋಟಿ ಕಲೆಕ್ಷನ್ ಮಾಡಿ ಹಿಟ್ ಲಿಸ್ಟ್ ಗೆ ಸೇರಿದ ದಾಖಲೆ ಮಾಡಿದೆ.
ಮೂಲಗಳ ಪ್ರಕಾರ ಕವಲು ದಾರಿ 6 ಕೋಟಿ ರೂ. ಕಲೆಕ್ಷನ್ ಮಾಡಿದೆಯಂತೆ. ಈಗಲೂ ಥಿಯೇಟರ್ ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಇನ್ನಷ್ಟು ಗಲ್ಲಾಪೆಟ್ಟಿಗೆಯಲ್ಲಿ ಲಾಭ ತಂದುಕೊಂಡುವುದು ಖಚಿತ. ಅಂತೂ ಪವರ್ ಸ್ಟಾರ್ ನಿರ್ಮಾಣ ಸಂಸ್ಥೆ ಮೊದಲ ಪ್ರಯತ್ನದಲ್ಲೇ ಜಯ ಕಂಡಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ